ಗಂಗಾವತಿ : ಕರ್ತವ್ಯ ಲೋಪವೆಸಗಿದ ಮುಖ್ಯ ಪೇದೆ ? ಜೊತೆ ? ಪಿಎಸ್‌ಐ, ಪಿಐ 9 ಜನರ ವಿರುದ್ಧ ಪ್ರಕರಣ ದಾಖಲು.ಗಂಗಾವತಿ 06 ಈದ್ಗಾ ಕಾಲೋನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ವೇಳೆ ಆದ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಮುಖ್ಯಪೇದೆ ಮರಿಯಪ್ಪ ಸೇರಿದಂತೆ PSI ಕಾಮಣ್ಣ ಮತ್ತು ಪಿಐ ಅಡಿವೆಪ್ಪ ಗುದಿಗೊಪ್ಪ ಅವರನ್ನು ಸಸ್ಪೆಂಡ್ ಮಾಡಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಆದೇಶ
ಹೊರಡಿಸಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆಗೆ ಠಾಣೆಯಿಂದ ನೀಡಿದ ನಿರ್ದೇಶನಗಳನ್ನು ಮೀರಿ ಮಸೀದಿಯ ಮುಂದೆ ಯಜ್ಞ ಮಂಡಲ ಹಾಕಿ ವೀರಗಾಸೆ ನೃತ್ಯ ಮಾಡಿ ನಗರದಲ್ಲಿ ಅಶಾಂತಿಗೆ ಕಾರಣರಾದ ವಂದೇ ಮಾತರಂ ಯುವಕ ಸಂಘದ 9 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ “ಅಶಾಂತಿಗೆ ಕಾರಣನಾದ ಮುಖ್ಯ ಪೇದೆ!? ” ” ಎಂಬ ಶಿರೋನಾಮೆಯಿಂದ ವಿಡಿಯೋ ದೃಶ್ಯಾವಳಿ ಸಹಿತ ತನ್ನ ನೈಜತೆಯ ಜೊತೆಗೆ ಸವಿಸ್ತಾರವಾಗಿ ನಿರ್ಭಿತಿಯಿಂದ ಸುದ್ದಿ ಪ್ರಕಟಿಸಿತ್ತು,
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪಳ ಎಸ್ ಪಿ ರವರು ಮೂವರನ್ನು ಅಮಾನತ್ತುಗೊಳಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆ ಬಂದೋಬಸ್ತ ನೇತೃತ್ವ ವಹಿಸಿದ್ದ ಪಿಸಿ ಮರಿಯಪ್ಪ, ಜಾಮಿಯಾ ಮಸೀದಿಯ ಮುಂದೆ ಮಂಡಲ ಹಾಕಿ ವೀರಗಾಸೆ ನೃತ್ಯಕ್ಕೆ ಅನುಮತಿ ನೀಡಿದ್ದು ಮತ್ತು ಮಸೀದಿ ಮುಂದೆ ಬಂದೋಬಸ್ತಿನಲ್ಲಿದ್ದ ಪಿಎಸ್‌ಐ ಕಾಮಣ್ಣ ಅದನ್ನು ತಡೆಯದೆ ಅವಕಾಶ ನೀಡಿದ್ದು ಅವರ ಮೇಲೆ ಇಲಾಖಾ ಶಿಸ್ತು ಕ್ರಮ ಪ್ರಶಂಸನೀಯ ವಾಗಿದ್ದು, ಘಟನೆ ನಡೆದ ಐದೇ ನಿಮಿಶದಲ್ಲಿ ಸ್ಥಳಕ್ಕೆ ಬಂದು ಮುಂದೆ ಆಗಬಹುದಾಗಿದ್ದ ಯಾವುದೇ ಘಟನೆಯನ್ನು ನಿಯಂತ್ರಿಸಿ ಮಸೀದಿಯ ಮುಂದೆ ಜಮಾಯಿಸುತ್ತಿದ್ದ ಯುವಕರನ್ನು ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದ ಪಿಐ ಅಡಿವೆಪ್ಪರನ್ನು ಅಮಾನತ್ತು ಗೊಳಿಸಿದ್ದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದ್ದಾರೆ.