BREAKING : ಅರ್ಜುನ ಇನ್ನಿಲ್ಲ : ಭಾವುಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ..!!

You are currently viewing BREAKING : ಅರ್ಜುನ ಇನ್ನಿಲ್ಲ : ಭಾವುಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ..!!

ಬೆಂಗಳೂರು : ‘ಸತತ 8 ಬಾರಿ ಮೈಸೂರು ದಸರಾದಲ್ಲಿ ವಿಶ್ವ ವಿಖ್ಯಾತ ಅಂಬಾರಿ ಹೊತ್ತಿದ್ದ ಅರ್ಜುನ (ವ‍ರ್ಷ 64), ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆಯಲ್ಲಿ ಒಂಟಿ ಸಲಗ ದಾಳಿಯಿಂದಾಗಿ ಇಂದು ಮೃತಪಟ್ಟಿದೆ. ದಸರಾ ಆನೆ ಅರ್ಜುನ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅತೀವ ನೋವಾಯಿತು’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾವುಕರಾಗಿ ತಿಳಿಸಿದ್ದಾರೆ.

BREAKING : ಕರ್ತವ್ಯನಿರತ KSRTC ಬಸ್ ನಿರ್ವಾಹಾಕ ಕಂ ಚಾಲಕ ಹೃದಯಾಘಾತದಿಂದ ಸಾವು!!

BIG NEWS : ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್..!!

ಈ ಕುರಿತು ಟ್ವಿಟ್ ಮಾಡಿರುವ ಸಿಎಂ, ‘ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು 8 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ (ಅರ್ಜುನ) ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು’ ಎಂದಿದ್ದಾರೆ.

LOCAL NEWS : ವಕೀಲರ ಮೇಲೆ ಪೊಲೀಸರಿಂದ ದೌರ್ಜನ್ಯ ಪ್ರಕರಣ : ತೀವ್ರವಾಗಿ ಖಂಡಿಸಿದ ವಕೀಲರು..!

‘ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ’ ಎಂದು ಅವರು ಭಾವುಕ ನುಡಿಗಳಿಂದ ಹೇಳಿದ್ದಾರೆ.

Leave a Reply

error: Content is protected !!