ಕುಕನೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಶೇಕಡಾ 73% ಮತದಾನ ಪ್ರಕ್ರಿಯೇ ಶಾಂತಯುತವಾಗಿ ನೆಡೆದಿದೆ.
ಅವಳಿ ತಾಲೂಕಿನ ಎಲ್ಲ ಬೂತ್‌ಗಳಲ್ಲಿಯು ಸಹಿತ ಶಾಂತಿಯುತ ಮತದಾನ ನೆಡೆದಿದ್ದು, ಕುಕನೂರು ಪಟ್ಟಣದ 19 ನೇ ವಾರ್ಡ ಗುದ್ನೇಪ್ಪನಮಠ ಬೂತ್ ಸಂಖ್ಯೆ 211 ರಲ್ಲಿ ಮಾತ್ರ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರಿಂದ ಮತದಾನ ಪ್ರಕ್ರಿಯೇ ಇಲ್ಲಿ ನೀರಸವಾಗಿ ಕಂಡು ಬಂದಿತು.
ಸ್ಥಳೀಯ ಗುದ್ನೇಶ್ವರ ಮಠದ ಜಮೀನಿನಲ್ಲಿ ತಹಸೀಲ್ದಾರ್ ಕಚೇರಿ, ನ್ಯಾಯಾಲಯ ಕಟ್ಟಡ, ಅಂಬೇಡ್ಕರ್ ಭವನದ ಕಟ್ಟಡಗಳ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಅದನ್ನು ವಿರೋಧಿಸಿ ಸ್ಥಳೀಯರು ಬಹುತೇಕ ಮತದಾನ ಮಾಡದೇ ದೂರ ಉಳಿದರು. ಉದ್ದೇಶಿಸಿತ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಈಗಾಗಲೇ ಕಂದಾಯ ಇಲಾಖೆ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಿದ್ದರು. ತಮ್ಮ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ ಮತದಾನ ಮಾಡದೇ ಅನೇಕರು ದೂರ ಉಳಿದಿದ್ದರಿಂದ ಮತಗಟ್ಟೆಯಲ್ಲಿ ಅತ್ಯಂತ ನೀರಸ ಮತದಾನ ಕಂಡು ಬಂದಿತು. ಸಂಜೆ ಆರು ಗಂಟೆಯ ವರೆಗೆ ಕೇವಲ 67 ಜನ ಮಾತ್ರ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಡಿವೈಎಸ್‌ಪಿ, ವೃತ ಪೊಲೀಸ್ ಅಧಿಕಾರಿಗಳು, ತಾಲೂಕು ಆಡಳಿತ ಅಧಿಕಾರಿಗಳು ಮತದಾನದ ಬಗ್ಗೆ ಮನವಿ ಮಾಡಿದರು.
ಬೆಳಿಗ್ಗೆ 11 ಗಂಟೆಯ ವರೆಗೂ ಯಾರು ಮತದಾರ ಮತಗಟ್ಟೆ ಹತ್ತಿರ ಸುಳಿದಿರಲಿಲ್ಲ ನಂತರ ಕೆಲವರು ಪೊಲೀಸ್ ಸಿಬ್ಬಂದಿಗಳ ನೆರವಿನಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಆದರೂ ಕೂಡಾ ಕುಕನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 19 ನೇ ವಾರ್ಡ್ ನಲ್ಲಿ ಅತ್ಯಂತ ನೀರಸ ಮತದಾನ ಕಂಡು ಬಂದಿತು. ಒಟ್ಟು 1066 ಮತದಾರರಲ್ಲಿ 67 ಮತಗಳು ಚಲಾವಣೆಯಾಗಿರುವ ಬಗ್ಗೆ ವರದಿಯಾಗಿದೆ.
ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಉಳಿದಂತೆ ಪಟ್ಟಣದ ಬಹುತೇಕ ಬೂತ್‌ಗಳಲ್ಲಿ ಉತ್ತಮ ಪ್ರತಿಕ್ರಿಯೇ ದೊರೆತಿದೆ.