ಕವಳಕೇರಿ ಯುವಕರ ಕಾರ್ಯ ಶ್ಲಾಘನೀಯ : ಈರಪ್ಪ ಕುಡಗುಂಟಿ
ಕುಕನೂರು : ಸಾಮೂಹಿಕ ವಿವಾಹಗಳಂತ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕವಳಕೇರಿ ಗ್ರಾಮದ ಯುವಕರು ಮಾಡುತ್ತೀರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಉದ್ಯಮಿ ಈರಪ್ಪ ಕುಡಗುಂಟಿ ಹೇಳಿದರು.
ತಾಲೂಕಿನ ಕವಳಕೇರಿ ಗ್ರಾಮದಲ್ಲಿ ರವಿವಾರ ಜೈ ಭೀಮ್ ಕಾಂತ್ರಿ ಯುವ ಸೇನೆ ಸಮಿತಿಯಿಂದ ಆಯೋಜಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಇಂದಿನ ಯುವಕರು ನಾನಾ ಚಟಗಳಿಗೆ ದಾಸರಾಗಿ ಕೆಲವು ಸಹ ಮನೆಯವರ ಮಾತನ್ನೇ ಕೇಳುವುದಿಲ್ಲ. ಇಂತಹ ದಿನಮಾನಗಳಲ್ಲಿ ಗ್ರಾಮದ ಯುವಕರೆಲ್ಲಾ ಸೇರಿಕೊಂಡು ಅಚ್ಚುಕಟ್ಟಾಗಿ ಸಾಮೂಹಿಕ ವಿವಾಹ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸುತ್ತಮುತ್ತಲಿನ ಯುವಕರಿಗೆ ಮಾದರಿಯಾಗಿದ್ದಾರೆ. ಇಂತಹ ಸಾಮಾಜಿಕ ಕಾರ್ಯ ಮಾಡುತ್ತಿರು ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. (more…)
0 Comments
24/04/2023 10:20 am