ಭಾರತದ ಸಂವಿಧಾನ ಪುಸ್ತಕ ಬಿಡುಗಡೆ
ಬೆಂಗಳೂರು : ವೆಂಕಟೇಶ ವಾಲ್ಮೀಕ ಸಂಪಾದಿತ ಭಾರತದ ಸಂವಿಧಾನ ಪುಸ್ತಕವನ್ನು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಬಿಡುಗಡೆಗೊಳಿಸಿದರು.
ತಾಲೂಕಿನ ಶಿರೂರು ಗ್ರಾಮದ ಯುವಕ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು, ಸದಾ ಸಾಮಾಜಿಕ, ರಾಜಕೀಯ ಚಿಂತನೆಗಳನ್ನು ಹೊಂದಿದ್ದಾನೆ. ಪ್ರಸ್ತುತ ಗದುಗಿನ ಸಂಕೇತ ಪದವಿ ಪಊರ್ವ ಕಾಲೇಜಿನಲ್ಲಿ ಪ್ರಾಯಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದು. ರಾಜಕೀಯ ಶಾಸ್ತç ಹಾಗೂ ಸಂವಿಧಾನದ ವಿಷಯದ ಬಗ್ಗೆ ಹೆಚ್ಚಿನ ಜ್ಞಾನವನ್ನು ಗೊಂದಿರುವುದರಿಂದ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಕೃತಿಗಳನ್ನು ರಚಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೇಗಳಿಗೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಸದ್ಯ ಭಾತರದ ಸಂವಿಧಾನ ಎಂಬ ಪುಸ್ತಕವನ್ನು ರಚನೆ ಮಾಡಿದ್ದು ಬೆಂಗಳೂರಿನಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ರವರ ಆಲೋಚನೆಗಳು ಸಾಕಾರಗೊಳ್ಳಬೇಕಾದರೆ ಸಂವಿಧಾನದ ಓದು ಅಗತ್ಯವಾಗಿದೆ. ಇಂತಹ ಸಂಪಾದಿತ ಕೃತಿಗಳಿಂದ ಸಂವಿಧಾನದ ಆಶಯ ಹಾಗೂ ಸಂವಿಧಾನದ ಮಹತ್ವ ಪ್ರತಿಯೊಬ್ಬರಿಗೂ ತಿಳಿಯಳಿದೆ ಎಂದರು.
ಸಂದರ್ಭದಲ್ಲಿ ಪರಶುರಾಮ ಯಾದಗಿರಿ, ಲಕ್ಷ್ಮಣ ಕಾಳಿ, ರಮೇಶ್ ಪ್ರಮೋಜಿ, ಮದನ್ ನದಾಫ್, ನವೀದ್ ಅಭಿಲಾಶ್ ಹಾಗೂ ಇತರರಿದ್ದರು.