ಕೊಪ್ಪಳ : ಸಾಹಿತಿ ಸ್ವಾತಂತ್ರ್ಯ ಹೋರಾಟಗಾರ ಕಥೆಗಾರ ಕವಿ ಅನುವಾದಕ ಹಾಗೂ ಬಹುಭಾಷಾ ವಿದ್ವಾಂಸರಾಗಿ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರಾಗಿ ಸಹಿತ ಕೊಪ್ಪಳದ ಕೀರ್ತಿ ಬೆಳಗಿಸಿದ ಡಾ.ಪಂಚಾಕ್ಷರಿ ಹಿರೇಮಠ ಇನ್ನಿಲ್ಲ.
ತಾಲೂಕಿನ ಬಿಸರಳ್ಳಿ ಗ್ರಾಮದ ಪಂಚಾಕ್ಷರಿ ಹಿರೇಮಠ (92) ಇವರು ಶುಕ್ರವಾರ ಸಂಜೆ ಧಾರವಾಡದಲ್ಲಿ ನಿಧನರಾಗಿದ್ದಾರೆ. ಇಂದು (ಮಾ.15) ಸ್ವಗ್ರಾಮ ಬಿಸರಹಳ್ಳಿಯಲ್ಲಿ ಸಂಜೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.
1933ರ ಜನೇವರಿ.6ರಂದು ಬಿಸರಳ್ಳಿ ಯಲ್ಲಿ ಜನಿಸಿದವರಾಗಿದ್ದಾರೆ. ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರ ಈ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಉರ್ದು ಹಿಂದಿ ಗುಜರಾತಿ ಸಹಿತ ವಿವಿಧ ಭಾಷೆಗಳ ಸಾಹಿತ್ಯ ಕೃಷಿ ಮಾಡಿದ್ದಾರೆ. ವಿವಿಧ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಸಲ್ಲಿವೆ.