ಮುದಗಲ್ ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅದ್ದೂರಿ ಜಾತ್ರಾ ಮಹೋತ್ಸವ
ರಾಯಚೂರು ಜಿಲ್ಲೆಯ ಐತಿಹಾಸಿಕ ಮುದಗಲ್ ಪಟ್ಟಣದ ಕಿಲ್ಲಾದ ಶ್ರೀ ರಾಮಲಿಂಗೇಶ್ವರ ಜಾತ್ರೆ ಹಾಗೂ ರಥೋತ್ಸವದ ಅಂಗವಾಗಿ ಕಳಸ ಹಾಗೂ 251 ಕುಂಭ ಮೆರವಣಿಗೆ ನಡೆಯಿತು ಪಟ್ಟಣದ ಕುಂಬಾರ ಓಣಿ ಬಸವೇಶ್ವರ ದೇವಸ್ಥಾನದಿಂದ ನೂರಾರು ಮಹಿಳೆಯರು ಕಳಸ ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.
ರವಿವಾರ ಬೆಳಗ್ಗೆಯಿಂದ ಭಕ್ತರು ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು
ಸಂಜೆ 6 ಗಂಟೆಗೆ ಪಟ್ಟಣದ ಅಂಧ್ರೊನಿ ಕಿಲ್ಲಾ ದಲ್ಲಿ ಇರುವ 11ನೇಯ ಶತಮಾನದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ರಥೋತ್ಸವ ಕ್ಕೆ ಪೂಜೆ ಸಲ್ಲಿಸಿ ಕರ್ಪೂರ ಬೆಳಗಿಸಿ ರಥೋತ್ಸವ ಎಳೆಯುವ ಮೂಲಕ
ಅಪಾರ ಭಕ್ತ ಸಮೂಹದೊಂದಿಗೆ ಸಂಗೀತ ವಾದ್ಯ ಮೇಳಗಳ ಜೋತೆಗೆ ಅದ್ದೂರಿ ಯಾಗಿ ರಥೋತ್ಸವ ಜರಗಿಸಲಾಯಿತು