ಮುದಗಲ್ಲ ವರದಿ…
ಮಣ್ಣಿನ ಅರವಟ್ಟಿಗೆಗಳ ಮೂಲಕ ಮೂಕ ಪ್ರಾಣಿಗಳ ದಾಹ ತೀರಿಸಲು ಮುಂದಾದ ವನಸಿರಿ ತಂಡದ ಕಾರ್ಯ ಶ್ಲಾಘನೀಯ:- ಪಿ ಎಸ್ ಐ ವೆಂಕಟೇಶ್ …
ಮುದಗಲ್ಲ : ಪ್ರತಿ ಸಾರಿ ಬೇಸಿಗೆ ಬಂದಾಗೊಮ್ಮೆ ಮುದುಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಸೃಷ್ಟಿಯಾಗಿ ಹಕ್ಕಿಪಕ್ಷಿಗಳು ತೊಂದರೆ ಎದುರಿಸುವುದು ಸಹಜವಾಗಿದೆ.
ಜನ ಬಾಯಾರಿದರೆ ಕುಡಿವ ನೀರು ಖರೀದಿಸಿ ನೀರಿನ ದಾಹ ನೀಗಿಸಿಕೊಳ್ಳುತ್ತಾರೆ.ಆದರೆ, ಮೂಕ ಪ್ರಾಣಿಗಳ ರೋಧನೆ ಹೇಳತೀರದಾಗಿದೆ.ಈ ಸಮಸ್ಯೆ ಅರಿತ ವನಸಿರಿ ಪೌಂಡೇಷನ್ ತಂಡ ರಾಜ್ಯಾದಂತ ಮೂಕ ಪ್ರಾಣಿಗಳಿಗೆ ನೀರು ಪೂರೈಸಿ ರಕ್ಷಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮುದುಗಲ್ ಪೊಲೀಸ್ ಠಾಣೆಯ PSI ವೆಂಕಟೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುದುಗಲ್ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮವನ್ನು ಮಣ್ಣಿನ ಅರವಟ್ಟಿಗೆಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ ಸಿಂಧನೂರಿನ ವನಸಿರಿ ಫೌಂಡೇಶನ್ ತಂಡದವರು ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ಇತ್ತೀಚಿಗೆ ಪಕ್ಷಿ ಸಂಕುಲ ನಾಶವಾಗುತ್ತಿರುವುದಕ್ಕೆ ಪಕ್ಷಿ ಸಂಕುಲ ಉಳಿಸಲು ಮತ್ತು ಹೆಚ್ಚಿಸಲು ಬೇಸಿಗೆಯಲ್ಲಿ ರಾಜ್ಯಾದಂತ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಸುಮಾರು 5 ಸಾವಿರಕ್ಕೂ ಹೆಚ್ಚು ಮಣ್ಣಿನ ಅರವಟ್ಟಿಗೆಗಳನ್ನು ತಯಾರಿಸಿ ಸಮುದಾಯದೊಂದಿಗೆ ಸೇರಿ ಗಿಡಮರಗಳಿಗೆ ಕಟ್ಟಿ ಮೂಕ ಪ್ರಾಣಿಗಳಿಗೆ ನಿರುಣಿಸುವ ಕಾರ್ಯ ಮಾಡುತ್ತಿದ್ದು,ಇಂದು ಮುದುಗಲ್ ಠಾಣೆಗೆ 10 ಮಣ್ಣಿನ ಮಡಿಕೆಗಳನ್ನು ಉಚಿತವಾಗಿ ನೀಡಿ,ಠಾಣೆಯ ಆವರಣದ ನಾನಾ ಮರಗಳಿಗೆ ಮಣ್ಣಿನ ಮಡಿಕೆಗಳನ್ನು ಕಟ್ಟಿ ನೀರುಣಿಸುವ ಕಾರ್ಯವನ್ನು ಕೈಗೊಂಡಿರುವುದು ಸ್ವಾಗತರ್ಹ.
ನೀರು ಬೇಸಿಗೆಯಲ್ಲಿ ಜನರಿಗೆ ಸಿಗುವಷ್ಟು ಸುಲಭವಾಗಿ ಹಕ್ಕಿ ಪಕ್ಷಿಗಳಿಗೆ ಇಂದಿನ ಆಧುನಿಕ ಯುಗದಲ್ಲಿ ನೀರು ಸಿಗಲಾರದೆ ದಾಹ ನೀಗಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ಅಲೆದಾಡುತ್ತಿವೆ.ಕೆಲ ಸಲ ನೀರಿನ ಅಭಾವದಿಂದ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ.ಇಂತಹ ಸಂಧರ್ಭದಲ್ಲಿ ಸಂಘ ಸಂಸ್ಥೆಗಳು, ಸಮುದಾಯದವರು,ಎಲ್ಲಾ ವರ್ಗದವರು ವನಸಿರಿ ಪೌಂಡೇಷನ್ ಜೊತೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ,ಹಾಗೂ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಆದೇಶ ಶಿಕ್ಷಕರು,ಸದಸ್ಯರಾದ ರಾಜು ಬಳಗನೂರು,ಚನ್ನಪ್ಪ ಕೆ ಹೊಸಹಳ್ಳಿ,ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಪೊಲೀಸ್ ಸಿಬ್ಬಂದಿಗಳು,ಪತ್ರಿಕಾ ಮಿತ್ರರು ಇದ್ದರು.
ವರದಿ:- ಮಂಜುನಾಥ ಕುಂಬಾರ