FLASH NEWS : ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭ..!!
ಕೊಪ್ಪಳ : ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು 21 ಮಾರ್ಚ್ 2025 ರಿಂದ 4 ಏಪ್ರಿಲ್ 2025 ರ ವರೆಗೆ ನಡೆಯುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲ ತರಹದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಪೊಲೀಸ್ ಇಲಾಖೆ ಬಿಗಿ ಬದ್ರತೆಯನ್ನು ಆಯೋಜಿಸಿದ್ದು ಜಿಲ್ಲೆಯಾದ್ಯಂತ ಒಟ್ಟು 73 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಶ್ರೀಶೈಲಪ್ಪ ಬಿರಾದರ ತಿಳಿಸಿರುತ್ತಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶ್ರೀಶೈಲಪ್ಪ ಬಿರಾದರ ಮಾತನಾಡುತ್ತ ಜಿಲ್ಲೆಯಾದ್ಯಂತ ಒಟ್ಟು 73 ಪರೀಕ್ಷೆ ಕೇಂದ್ರಗಳನ್ನು ಹೊಂದಿದ್ದು ಗಂಗಾವತಿ ಶೈಕ್ಷಣಿಕ ತಾಲೂಕಿನಲ್ಲಿ 23, ಕೊಪ್ಪಳ ತಾಲೂಕಿನಲ್ಲಿ 21, ಕುಷ್ಟಗಿ ತಾಲೂಕಿನಲ್ಲಿ 15, ಯಲಬುರ್ಗಾ ತಾಲೂಕಿನಲ್ಲಿ 14 ಕೇಂದ್ರಗಳು ಸೇರಿದಂತೆ ಒಟ್ಟು 73 ಕೇಂದ್ರಗಳನ್ನು ಹೊಂದಿದೆ. ಜೊತೆಗೆ ಗಂಗಾವತಿ ತಾಲೂಕಿನಲ್ಲಿ 8583 ವಿದ್ಯಾರ್ಥಿಗಳು, ಕೊಪ್ಪಳ ತಾಲೂಕಿನಲ್ಲಿ 6954, ಕುಷ್ಟಗಿ ತಾಲೂಕಿನಲ್ಲಿ 4766, ಯಲಬುರ್ಗಾ ಶೈಕ್ಷಣಿಕ ತಾಲೂಕಿನಲ್ಲಿ 5275ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 25578 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.