LOCAL NEWS : ‘ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿಗೆ ಕಾಂಗ್ರೆಸ್ ಸರಕಾರ ದುರಾಡಳಿತವೇ ಕಾರಣ’ : ಹಾಲಪ್ಪ ಆಚಾರ್
ಕುಕನೂರ : ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿಗೆ ನೇರ ಕಾಂಗ್ರೆಸ್ ಸರಕಾರ ದುರಾಡಳಿತವೇ ಕಾರಣ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ದೂರಿದರು.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರ ಬಂದಾಗಿಂದಲೂ ಒಂದಲ್ಲ ಒಂದು ರಾಜ್ಯದ ಜನರಿಗೆ ತೊಂದರೆ ಉಂಟಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಇತ್ತೀಚಿಗೆ ನಡೆಯುತ್ತಿರುವ ಧೋರಣೆ ದೌರ್ಜನ್ಯ ಪ್ರಕರಣಗಳು, ಕೊಲೆ-ಸುಲಿಗೆ ಭ್ರಷ್ಟಾಚಾರ ತಾಂಡವಾಡುತ್ತಿದೆ.
ಕೊಡಗು ಮೂಲದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ವಿನಯ್ ಸೋಮಯ್ಯ ರಾಜಕೀಯ ಪ್ರೇರಿತವಾಗಿ ಎಫ್ಐಆರ್ ದಾಖಲಿಸಿ, ಪ್ರತಿನಿತ್ಯ ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶಾಸಕ ಕೊಡಗು ಶಾಸಕ ಪೊನ್ನಣ್ಣ, ಮಂತರ್ ಗೌಡ, ಇನ್ನಿತರ ಕಾಂಗ್ರೆಸ್ ನಾಯಕರೇ ಈ ವಿನಯ್ ಸಾವಿಗೆ ಕಾರಣ. ಈ ಆತ್ಮಹತ್ಯೆ ಕೇಸನ್ನು ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ್, ಮುಖಂಡರಾದ ಸಿದ್ದು ಉಳ್ಳಾಗಡ್ಡಿ, ಶರಣಪ್ಪ ಬಣ್ಣದ ಬಾವಿ, ವೀರಣ್ಣ ಹುಬ್ಬಳ್ಳಿ, ಸಿ ಎಚ್ ಪೊಲೀಸ್ ಪಾಟೀಲ್, ಶಂಭುಲಿಂಗಪ್ಪ ಜೋಳದ, ಕರಬಸಯ್ಯ ಬಿನ್ನಾಳ, ಬಸನಗೌಡ ತೊಂಡಿಹಾಳ, ಶಿವಕುಮಾರ್ ನಾಗಲಾಪುರ ಮಠ, ಲಕ್ಷ್ಮಣ ಕಾಳಿ, ಜಗದೀಶ ಸೂಡಿ, ಕನಕಪ್ಪ ಬ್ಯಾಡರ, ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.