LOCAL NEWS : ಅಧಿಕಾರಿಗಳಿಂದ ರೈತರ ತೇಜೋವಧೆ : ರೈತ ಹನುಮಂತಪ್ಪ ಸಂಗಟಿ
ಕುಕನೂರು : ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಬೆಲೆ ಇಲ್ಲದಂತಾಗಿದ್ದು ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ರೈತರ ತೇಜೋವಧೆ ನಡೆಸುತ್ತಿದ್ದಾರೆ ಎಂದು ತಾಲೂಕಿನ ಇಟಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ರೈತ ಹನುಮಂತಪ್ಪ ಸಂಗಟಿ ಆರೋಪ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಹನುಮಂತಪ್ಪ ಸಂಗತಿ ಮಾತನಾಡುತ್ತ ತಾಲೂಕಿನ ಇಟಗಿ ಗ್ರಾಮದಲ್ಲಿ ಕೃಷಿ ಜಮೀನನ್ನು ತಾವು ಹೊಂದಿದ್ದು ಸರ್ವೆ ನಂಬರ್ 498 ಆಗಿದ್ದು 6 ಎಕರೆ 25 ವಿಸ್ತೀರ್ಣ ಹೊಂದಿರುತ್ತದೆ. ಪಕ್ಕದಲ್ಲಿರುವ 497 ಸರ್ವೇ ನಂಬರ್ ನಲ್ಲಿ 1995-96ನೇ ಸಾಲಿನಲ್ಲಿ ಆಶ್ರಯ ಯೋಜನೆ ಹಾಗೂ ನಿವೇಶಕ್ಕಾಗಿ ರೈತರಿಂದ ಸರಕಾರ ಭೂಮಿ ಖರೀದಿ ಮಾಡಿ ನಿವೇಶನ ನಿರ್ಮಾಣ ಮಾಡಿದ್ದು 113 ನಿವೇಶನಗಳಲ್ಲಿ ಬಹುತೇಕ ನಿವೇಶನಗಳನ್ನು ಉಳ್ಳವರಿಗೆ ಹಾಗೂ ಒಂದೊಂದು ಕುಟುಂಬಕ್ಕೆ ಎರಡರಿಂದ ಮೂರು ನಿಮಿಷಗಳನ್ನು ನೀಡಿರುತ್ತಾರೆ.
ಜೊತೆಗೆ ಇತ್ತೀಚಿಗೆ ಮಾರ್ಚ್ 6.ರಂದು ಈ ನಿವೇಶನವುಳ್ಳ ಜಮೀನನ್ನು ಸರ್ವೆ ಕಾರ್ಯಕ್ಕೆ ಎಂದು ಆಗಮಿಸಿದ ಅಧಿಕಾರಿಗಳು ದೌರ್ಜನ್ಯ ತೋರಿ 497 ಸರ್ವೇ ನಂಬರ್ ಬದಲು ನನ್ನ ಸರ್ವೇ ನಂಬರ್ 498ರಲ್ಲಿ ದೌರ್ಜನ್ಯದಿಂದ ಅಳತೆ ಮಾಡಿಕೊಂಡು ಹೋಗಿರುವುದು ಹಲವು ಅನುಮಾನವನ್ನು ಸೃಷ್ಟಿ ಮಾಡಿದೆ ಜೊತೆಗೆ ನನಗೆ ಸಹಿ ಮಾಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತಾಯಿಸಿದ್ದು ನಾನು ಒಪ್ಪದೆ ಇದ್ದದ್ದರಿಂದ ಗ್ರಾಮದ ಪಂಚಾಯತ್ ಕಾರ್ಯಾಲಯದ ಅಭಿವೃದ್ಧಿ ಅಧಿಕಾರಿ ಪಕ್ಕದ ಬಡಾವಣೆಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ನಿರ್ಮಾಣ ಮಾಡಲು ತಕರಾರು ನೀಡಿರುವುದಾಗಿ ಮೇಲಾಧಿಕಾರಿಗೆ ವರದಿ ನೀಡಿರುತ್ತಾರೆ.
ಮುಖ್ಯವಾಗಿ ನಾನು ನನ್ನ ಜಮೀನನ್ನು ಸರ್ವೆಗೆ ಅರ್ಜಿ ಸಲ್ಲಿಸದೇ ಇದ್ದರೂ ಸಹ ಯಾವುದೇ ನೋಟಿಸ್ ನೀಡದೆ ಏಕಾಏಕಿ ನನ್ನ ಜಮೀನಿಗೆ ಆಗಮಿಸಿ ಅಧಿಕಾರಿಗಳು ಸರ್ವೆ ಕಾರ್ಯ ಮಾಡಿದ್ದು ಸಹಿ ಮಾಡದೆ ಇರುವ ನನ್ನ ಮೇಲೆ ಅಭಿವೃದ್ಧಿ ಅಧಿಕಾರಿಗಳು ಇಲ್ಲ ಸಲ್ಲದ ಆರೋಪ ಮಾಡಿ ತೇಜವುದೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಕ್ಷಣವೇ ಅಧಿಕಾರಿಗಳು ಈ ಎಲ್ಲಾ ದೌರ್ಜನವನ್ನು ನಿಲ್ಲಿಸದೆ ಹೋದಲ್ಲಿ ನ್ಯಾಯಾಂಗದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.
ವೇಳೆಯಲ್ಲಿ ಗ್ರಾಮದ ಪ್ರಮುಖರಾದ ಮಹೇಶ್ ದೊಡ್ಡಮನಿ ಜೊತೆಯಲ್ಲಿದ್ದರು.