SPECIAL STORY : ಸಮಗ್ರ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಖುಷಿ ಕಂಡ ಗೊಜನೂರಿನ ಪ್ರಗತಿಪರ ರೈತ ಚನ್ನಪ್ಪ ಷಣ್ಮುಖಿ!

You are currently viewing SPECIAL STORY : ಸಮಗ್ರ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಖುಷಿ ಕಂಡ ಗೊಜನೂರಿನ ಪ್ರಗತಿಪರ ರೈತ ಚನ್ನಪ್ಪ ಷಣ್ಮುಖಿ!

ಪ್ರಜಾ ವೀಕ್ಷಣೆ ವಿಶೇಷ :-

SPECIAL STORY : ಸಮಗ್ರ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಖುಷಿ ಕಂಡ ಗೊಜನೂರಿನ ಪ್ರಗತಿಪರ ರೈತ ಚನ್ನಪ್ಪ ಷಣ್ಮುಖಿ!

ಶಿರಹಟ್ಟಿ : ತಾಲೂಕಿನ ಗೊಜನೂರ ಗ್ರಾಮದ ರೈತ ಚನ್ನಪ್ಪ ಷಣ್ಮುಖಿ ಒಟ್ಟು ಸ್ವಂತ 12ಎಕರೆ 20 ಎಕರೆ ಲಾವಣಿಯಲ್ಲಿ ಒಟ್ಟು 32ಎಕರೆ ಒಣಬೇಸಾಯ ಜಮೀನನಲ್ಲಿ ಮಳೆ ಆಶ್ರಿತದಲ್ಲಿ ವರ್ಷಕ್ಕೆ 8 ರಿಂದ 10ಲಕ್ಷ ಆದಾಯ ಗಳಿಸುವ ಮೂಲಕ ರೈತ ಸಮುದಾಯಕ್ಕೆ ಒಬ್ಬ ಮಾದರಿ ರೈತನಾಗಿ ಕಾಣಿಸಿಕೊಂಡಿದ್ದಾರೆ.

ಮುಂಗಾರುನಲ್ಲಿ ಶೇಂಗಾ ಹೆಸರು, ಮೆಣಸಿನಕಾಯಿ ಗೋವಿನಜೋಳ ಅಲಸಂದಿ, ಗುರುಳ್ಳ, ಉದ್ದು,ಇನ್ನಿತರ ಬೆಳೆಗಳು,ಹಿಂಗಾರುನಲ್ಲಿ ಜೋಳ ಕಡ್ಲಿ ಕುಸಬಿ ಅಗಸಿ ಮಡಕಿ ಇನ್ನಿತರ ಬೆಳೆಗಳು ಬೆಳೆದು ಒಟ್ಟು ಈ ವರ್ಷ 25 ಬೆಳೆಗಳನ್ನು ಭೂಮಿಯಲ್ಲಿ ಬೆಳೆದು,ಇಷ್ಟಪಟ್ಟು ದುಡಿದರೆ ಉತ್ತಮ ಆದಾಯ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆದು ಮನೆಯಲ್ಲಿ ಸಂಗ್ರಹ ಮಾಡುತ್ತಾರೆ.

ಕಳೆದ 30ವರ್ಷದ ಹಿಂದೆ ತಂದೆಗೆ ಅಪಘಾತವಾಗಿ ಅಂಗವಿಕಲರಾದ ಕಾರಣ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಆಗಿದ್ದ ಅವರು ಮುಂದೆ ಓದಲು ಆಗದೆ, ರೈತರಾದರು, ಹೈನುಗಾರಿಕೆಯಲ್ಲಿಯು ತೊಡಗಿಸಿ ಕೊಂಡಿರುವ ಇವರು ಖಾಸಗಿ ಚಾನೆಲ್ ನಲ್ಲಿ ರೈತರಿಗಾಗಿ ಸಂದರ್ಶನ ಕೊಟ್ಟು ಇತರೆ ರೈತರಿಗೆ ಮಾರ್ಗದರ್ಶನ ಮಾಡುವ ಮೂಲಕ ಪ್ರೇರಣೆ ಆಗಿದ್ದಾರೆ, ಸಾವಯವಕೃಷಿ, ರಾಸಾಯನಿಕ ಕೃಷಿಯಲ್ಲಿ ಪರಿಣಿತಿ ಹೊಂದಿದ್ದು ಬೆಳೆಗಳ ಸಂರಕ್ಷಣೆ ಕಟಾವು ಮಾಡುವ ಬಗ್ಗೆ, ಮಾರಾಟದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ,ಕೃಷಿಗೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕ ಹೊಂದಿ ಅವರಿಂದ ಮಾಹಿತಿ ಪಡೆದು ಅದನ್ನು ರೈತರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಅದಲ್ಲದೆ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುತ್ತಿರುವ ಇವರು ಒಬ್ಬ ಮಗ ಬಿ ಎಸ್ ಸಿ ಅಗ್ರಿ ಓದುತ್ತಿದ್ದು,ಒಬ್ಬ ಮಗಳು ಇಂಜನಿಯರಿಂಗ ಇನ್ನೊಬ್ಬಳು ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಧರ್ಮಪತ್ನಿ ಪುಷ್ಪಾ ಪತಿಗೆ ಬೆನ್ನಿಗೆ ಹೆಗಲು ಆಗಿನಿಂತು ಕೃಷಿಯಲ್ಲಿ ಸಾಥ ನೀಡಿದ್ದಾಳೆ, ಒಟ್ಟಾರೆ ರೈತರು ಎಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ಒಬ್ಬ ರೈತನಾಗಿ ಉತ್ತಮ ಆದಾಯ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಾದರಿಯಾಗಿದ್ದಾರೆ,ಇಂತಹವರನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ಗುರಿತಿಸಿ ಪ್ರೋತ್ಸಾಹಿಸಬೇಕು.

“ಯುವಕರ ಸ್ವಇಚ್ಛೆಯಿಂದ ಶ್ರದ್ಧೆಯಿಂದ ಕೃಷಿಯಲ್ಲಿ ತೊಡಗಲು ಗಮನ ಹರಿಶಬೇಕು, ಕೃಷಿ ಬಗ್ಗೆ ಹೆಚ್ಚು ಜ್ಞಾನ ಪಡೆದುಕೊಳ್ಳಲು ಇಚ್ಛಾಶಕ್ತಿ ಹೊಂದಿರಬೇಕು,ಸಮಗ್ರ. ಕೃಷಿಗೆ ಹೆಚ್ಚು ಒತ್ತು ಕೊಟ್ಟು ಉತ್ತಮ ಆದಾಯ ಗಳಿಸಬೇಕು”

 :- ರೈತ ಚನ್ನಪ್ಪ ಷಣ್ಮುಖಿ

ವರದಿ: ವೀರೇಶ ಗುಗ್ಗರಿ

Leave a Reply

error: Content is protected !!