LOCAL BREAKING : ಜಿಲ್ಲೆಯಲ್ಲಿ ಭಾರಿ ಮಳೆ : ರೈತನಿಗೆ ಸಂಕಷ್ಟ..!!
ಕನಕಗಿರಿ : ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಆಲಿಕಲ್ಲು ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಗೆ ಗ್ರಾಮದ ಹಬಿದಾ ಬೇಗಂ ರಸೂಲಸಾಬ್ ಅವರಿಗೆ ಸೇರಿದ ಬಾಳೆಗಿಡಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ಬೆಳೆದ ರೈತ ಮಹಿಳೆಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಠವಾಗಿದ್ದು ಕಂಡುಬಂದಿದೆ.
2 ಎಕರೆ ತೋಟದಲ್ಲಿ 2500 ಸಾವಿರ ಬಾಳೆ ಸಸಿನೆಟ್ಟು ಪೋಷಣೆ ಮಾಡಿದ್ದು, ಕಟಾವಿಗೆ ಬಂದಿದ್ದ ಕೆಂಪು ಬಾಳೆ ಒಂದು ಕೆ. ಜಿ. ಗೆ ಸುಮಾರು 100ರೂ. ಮಾರಾಟವಾಗುತ್ತಿತ್ತು. ಆದರೆ, ಇತ್ತೀಚೆಗೆ ಇದರ ಬೇಡಿಕೆ ಇತ್ತು, ಅದು ಅಲ್ಲದೇ ಕೈ ಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಸ್ಥಿತಿ ಇದೀಗ ಉಂಟಾಗಿದೆ.
ಸಾಲ-ಶೂಲ ಮಾಡಿ ಬಾಳೆ ಬೆಳೆದಿದ್ದು ಬೆಳೆ ಏಕಾಏಕಿ ಮಳೆಗೆ ನೆಲಕ್ಕೆ ಉರುಳಿ ಬಿದ್ದಿದ್ದು ರೈತ ಮಹಿಳೆ ದಿಕ್ಕು ತೊಚದಂತಾಗಿದೆ. ಈಗ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆ ಕಾಡುತ್ತಿ್ದೆ. ಹಾಗಾಗೀ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಇವರಿಗೆ ಆದ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಕನಕಗಿರಿ ಯುವ ಮುಖಂಡ ಸುಭಾನ್ ಸಯ್ಯದ್ ಅವರು ಈ ಮೂಲಕ ಒತ್ತಾಯಿಸಿದ್ದಾರೆ.