ಮುದಗಲ್ಃ ಪಟ್ಟಣ ಸೇರಿದಂತೆ ನಾಗಲಾಪೂರು ,ಆಮದಿಹಾಳ, ಮಾಕಾಪೂರು ಮೂಕ ಪ್ರಾಣಿಗಳ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದು ಸುಮಾರು ವರ್ಷಗಳು ಮುಗಿದಿದೆ. ಚುನಾಯಿತ ಜನಪ್ರತಿನಿಧಿಗಳ ಹಾಗೂ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಉದ್ಘಾಟನೆ ನೆನೆಗುದಿಗೆ ಬಿದ್ದಿದೆ.
ಈ ನೂತನ ಕೊಠಡಿಗಳ ಉದ್ಘಾಟನೆ ಯಾವಾಗ ಎನ್ನುವದು ರೈತರ ಪ್ರಶ್ನೆಯಾಗಿದೆ.
೨೦೨೦-೨೧ ಸಾಲಿನ ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆಯಿಂದ ಆರ್,ಆಯ್,ಡಿ,ಎಫ್, ನಬಾರ್ಡ೨೫ರ ಯೋಜನೆ ಅಡಿಯಲ್ಲಿ ಸುಮಾರು ೪೪ ಲಕ್ಷ ರೂ ಗಳ ಮೊತ್ತದಲ್ಲಿ ಮುದಗಲ್ ,ನಾಗಲಾಪೂರು,ಮಾಕಾಪೂರು,ಆಮದಿಹಾಳ ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ ಕಟ್ಟಡದ ಕಾಮಗಾರಿ ಮುಗಿದು ಮೂರು ನಾಲ್ಕು ವರ್ಷಗಳು ಕಳೆದಿವೆ ಆದರೆ ಲಿಂಗಸುಗೂರ ತಾಲೂಕಿನ ಚುನಾವಣೆ ಜನಪ್ರತಿನಿಧಿಗಳ ಹಾಗೂ ಪಶು ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಉದ್ಘಾಟನೆಯಾಗಿಲ್ಲ.
ಈ ಕೊಠಡಿಗಳ ಉದ್ಘಾಟನೆ ಕುರಿತು ರೈತರು ಅನೇಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಮಾಡೋಣ ಮಾಡೋಣ ಅಂತಾ ರಾಜಕಾರಣಿಗಳ ತರ ಸುಳ್ಳು ಭರವಸೆ ನೀಡುತ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು
ಮುದಗಲ್, ನಾಗಲಾಪೂರು,ಮಾಕಾಪೂರು, ಆಮದಿಹಾಳ ಗ್ರಾಮಗಳ ಹಳೆ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡು ಮೇಲ್ಚಾವಣಿ ಕುಸಿಯುವ ಹಂತಕ್ಕೆ ತಲುಪಿ ಜೀವ ಭಯದಲ್ಲಿ ಕೆಲಸ ಮಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ ಪಶು ವೈದ್ಯಧಿಕಾರಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಮಳೆ ಬಂದರೆ ಸಾಕು ಪಶು ಆಸ್ಪತ್ರೆಯ ಕೊಠಡಿಗಳು ಸೋರುತ್ತಿವೆ ಔಷಧಿಗಳು ಹಾಳಾಗುತ್ತಿರುವದರಿಂದ ಔಷಧಿಗಳು ಶೇಖರಣೆ ಮಾಡಿಟ್ಟುಕೊಳ್ಳಲು ತುಂಬಾ ತೊಂದರೆಯಾಗಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಸಮಯಕ್ಕೆ ಪಶು ವೈದ್ಯಾಧಿಕಾರಿಗಳು ಸಿಗದ ಹಿನ್ನಲೆಯಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ ಹಾಗೂ ಮೂಕ ಪ್ರಾಣಿಗಳ ರೋಧನೆ ತಾಲೂಕ ಪಶು ಅಧಿಕಾರಿಗಳಿಗೆ ಕೇಳಿಸುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಅನುಮಾನ ಮೂಡಿದೆ
ಸುಸೂತ್ರ ವಾಗಿ ಪಶು ಆಸ್ಪತ್ರೆಯ ಕೊಠಡಿಗಳ ನಿರ್ಮಾಣ ಮಾಡುವ ಸಲುವಾಗಿ ಸರಕಾರ ಅನುದಾನ ನೀಡದೆ ಕಾಮಗಾರಿ ಕೂಡ ಮುಗಿದಿದೆ ಆದರೆ ಉದ್ಘಾಟನೆ ಮಾಡಲು ಹಿಂಡೇಟು ಹಾಕಿರುವದು ಕಂಡು ಬಂದಿದೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ನೂತನ ಪಶು ಆಸ್ಪತ್ರೆ ಉದ್ಘಾಟನೆ ಮಾಡುತ್ತಾರ ಕಾದು ನೋಡಬೇಕು
” ಪಶು ಇಲಾಖೆ ಅಧಿಕಾರಿಗಳು ಈ ಕೂಡಲೆ ಆಸ್ಪತ್ರೆ ಉದ್ಘಾಟನೆ ಮಾಡಿ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಬೇಕು ಅನುಕೂಲ ಮಾಡಿಕೊಂಡಬೇಕು – ಶರಣಪ್ಪ ಕಟ್ಟಿಮನಿ ದಲಿತ ಸಂಘರ್ಷ ಸಮಿತಿ ಲಿಂಗಸೂರು ತಾಲೂಕು ಅಧ್ಯಕ್ಷರು