ಮುದಗಲ್ಲ ವರದಿ..
ದವೇ೯ಸು ಅಲೆಮಾರಿ ಅಲೆ ಅಲೆಮಾರಿ ಸಂಘ ದಿಂದ ಉಚಿತ ಖತ್ನಾ ಕಾರ್ಯಕ್ರಮ..
ಮುದಗಲ್ಲ: ಇಸ್ಲಂ ಧರ್ಮದ ಸಂಪ್ರದಾಯದಲ್ಲಿ ಖತ್ನಾ ಎನ್ನುವದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಬಾಲಕರಿರುವಾಗಲೇ ಇಳಿ ವಯಸ್ಸಿನಲ್ಲಿ ಖತ್ನಾ ಮಾಡಿಸುವದು ವೈಜ್ಞಾನಿಕವಾಗಿದೆ ಎಂದು ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಕ ಡಾ| ಜಿಲಾನಿ ಆವಟಿ ಹೇಳಿದರು.
ಪಟ್ಟಣದ ಕಿಲ್ಲಾದಲ್ಲಿ ಕಲ್ಯಾಣ ಕರ್ನಾಟಕ ದರ್ವೆಸು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಾಮೂಹಿಕ ಖತ್ನಾ (ಮುಂಜಿವೆ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಸ್ಲಿಂ ಸಮಾಜದಲ್ಲಿ ಖತ್ನಾ ಮಾಡುವದು ಮುಖ್ಯ ಘಟ್ಟವಾಗಿದೆ. ಇದು ವೈಜ್ಞಾನಿಕವಾಗಿರುವಂತಹದು. ಸಣ್ಣ ಮಕ್ಕಳಿರುವಾಗಲೇ ಖತ್ನಾ ಮಾಡಿಸುವದರಿಂದ ಮಕ್ಕಳ ಬೆಳವಣಿಗೆಗೆ ಮತ್ತು ಚುರುಕು ಬುದ್ಧಿಗೆ ನೆರವಾಗಲಿದೆ ಎಂದು ಹೇಳಿದರು.
ಈ ಎರಡು ತಿಂಗಳಲ್ಲಿ ನಮ್ಮ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಲ್ಲ ರೀತಿಯ ಶಸ್ತç ಚಿಕಿತ್ಸೆಗಳಿಗೆ ಭಾಗಶ: ರಿಯಾಯಿತಿ ಮತ್ತು ಉಚಿತವಾಗಿ ನೆರವೇರಿಸಲು ಸಂಸ್ಥೆಯ ಮುಖ್ಯಸ್ಥರು ತೀರ್ಮಾನಿಸಿದ್ದಾರೆ. ಇದರ ಸದುಪಯೋಗವನ್ನು ಇಸ್ಲಾಂ ಸಮಾಜ ಬಾಂಧವರು ಸದುಪಯೋಗಪಡಿಸಿಕೊಂಡು ಬಡವರಿಗೆ ನೆರವಾಗಬೇಕೆಂದು ಮನವಿ ಮಾಡಿದರು. ಶಸ್ತç ಚಿಕಿತ್ಸಕರಿಂದಲೇ ಖತ್ನಾ ಮಾಡಿಸುವದು ಉತ್ತಮ ಎಂಬ ಕಿವಿ ಮಾತು ಹೇಳಿದರು.
ಡಾ| ಫಜಲ್ ಖಾದ್ರಿ ಎಂ.ಎಸ್. ಮಾತನಾಡಿದರು. ವೇದಿಕೆ ಮೇಲೆ ಪುರಸಭೆ ಉಪಾಧ್ಯಕ್ಷ ಅಜಮೀರ ಬೆಳ್ಳಿಕಟ್, ಧರ್ಮ ಗುರು ಜಮೀರ ಅಹ್ಮದ ಖಾಜಿ, ಪುರಸಭೆ ಸದಸ್ಯರಾದ ಅಮೀರಬೇಗ್ ಉಸ್ತಾದ, ಎಸ್.ಆರ್. ರಸೂಲ, ಮಹಿಬೂಬ ಕಡ್ಡಿಪುಡಿ, ದಾವೂದ್‌ಸಾಬ, ಪತ್ರಕರ್ತ ರಾಘವೇಂದ್ರ ಗುಮಾಸ್ತಿ,ಅನ್ವರ ಕಂದಗಲ್ಲ, ಕಲ್ಯಾಣ ಕರ್ನಾಟಕ ದರ್ವೇಶ ಸಂಘದ ಜಿಲ್ಲಾಧ್ಯಕ್ಷ ರಹಿಂಶಾ ಮಕಾನ್‌ದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹಿಯುದ್ದೀನ್ ಭಂಡಾರಿ, ಡಾ| ಹಾಜಿ ಮಸ್ತಾನ್, ಡಾ| ನವೀತ್ ಕಂದಗಲ್ಲ, ಮೀರುಷಾ, ಪೀರಾಷಾ, ಷೇರಲಿ, ಶಾಮೀದ ಶಾ, ಸೇರಿದಂತೆ ಮುಂತಾದವರಿದ್ದರು. ಉಚಿತ ಖತ್ನಾ ಶಿಬಿರದಲ್ಲಿ ೧೫೦ ಮಕ್ಕಳಿಗೆ ನೆರವೇರಿಸಲಾಯಿತು.