BREAKING: ರಣರೋಚಕ ಪಂದ್ಯದಲ್ಲಿ ಕೋಲ್ಕತ್ತಾಗೆ ಗೆಲುವು! : ಮೊದಲ ಹ್ಯಾಟ್ರಿಕ್ ವಿಕೆಟ್ ದಾಖಲೆ..!

You are currently viewing BREAKING: ರಣರೋಚಕ ಪಂದ್ಯದಲ್ಲಿ ಕೋಲ್ಕತ್ತಾಗೆ ಗೆಲುವು! : ಮೊದಲ ಹ್ಯಾಟ್ರಿಕ್ ವಿಕೆಟ್ ದಾಖಲೆ..!

2023ರ IPLನ 13ನೇ ಪಂದ್ಯದಲ್ಲಿ ಇಂದು ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ರಣರೋಚಕ 3 ವಿಕೆಟ್‌ನಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿತ ಓವರ್‌ನಲ್ಲಿ 204 ರನ್‌ ಬಾರಿಸಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಗೆ 205 ರನ್‌ಗಳ ಟಾರ್ಗೆಟ್‌ ನೀಡಿತ್ತು. ಈ ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ ಓವರ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 207 ರನ್‌ ಬಾರಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರ ವೆಂಕಟೇಶ್‌ 83, ನೀತಿಶ್‌ 45, ರಿಂಕೂ 48* ರನ್‌ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಬೌಲಿಂಗ್‌ ಮಾಡಿದ ರಶೀದ್ ಖಾನ್ ಸತತ 3 ವಿಕೆಟ್, ಜೋಶೆಫ್‌ 2, ಲಿಟ್ಟಲ್ & ಶಮಿ ತಲಾ ಒಂದು ವಿಕೆಟ್‌ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ವಿಜಯ 63*, ಸಾಯಿ 53, ಗಿಲ್‌ 39 ರನ್ ಗಳಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ನರೇನ್‌ 3, ಸುಯೇಶ್‌ 1 ವಿಕೆಟ್‌ ಪಡೆದರು.


13ನೇ ಪಂದ್ಯದಲ್ಲಿ ಇಂದು ಮೊದಲ ಹ್ಯಾಟ್ರಿಕ್ ದಾಖಲಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಪಂದ್ಯ ನಡೆಯುತ್ತಿದ್ದು, ಗುಜರಾತ್ ಬೌಲರ್ ರಶೀದ್ ಖಾನ್ ಸತತ 3 ವಿಕೆಟ್ ಪಡೆದರು. ಈ ಪಂದ್ಯದ 16ನೇ ಓವರ್‌ನಲ್ಲಿ ಮೊದಲ 3 ಎಸೆತಗಳಲ್ಲಿ ರಸೆಲ್, ನರೈನ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್‌ ಪಡೆದರು.

Leave a Reply

error: Content is protected !!