LOCAL NEWS : ಭಗೀರಥ ಜಯಂತಿ: ಪೂರ್ವಭಾವಿ ಸಭೆ
ಕುಕನೂರು : ಕುಕನೂರು ತಹಸಿಲ್ದಾರರ ಕಾರ್ಯಾಲಯದಲ್ಲಿ ಶ್ರೀಭಗೀರಥ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು.
ಮೇ 4ರಂದು ಆಚರಿಸಲ್ಪಡುವ ಶ್ರೀ ಭಗೀರಥ ಜಯಂತಿಯ ಆಚರಣೆಯ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಕುಕನೂರು ತಾಲೂಕ ಗ್ರೇಡ್ 2 ತಹಸಿಲ್ದಾರ ಮುರಳಿದ ರಾವ್ ಕುಲಕರ್ಣಿ ಮಾತನಾಡಿ ಮಹನೀಯರು ಹಾಕಿಕೊಟ್ಟ ಮಾರ್ಗ ನಮಗೆ ಅತ್ಯಂತ ಅವಶ್ಯಕವಾಗಿದ್ದು ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕುತ್ತ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ. ಹಾಗೂ ತಾಲೂಕಿನ ಅತ್ಯಂತ ಎಲ್ಲಾ ಶಾಲಾ ಕಾಲೇಜು ಹಾಗು ಸರ್ಕಾರಿ ಕಾರ್ಯಾಲಯಗಳಲ್ಲಿ ಸಕಲ ಗೌರವದೊಂದಿಗೆ ಮಹನೀಯರ ಜಯಂತಿ ಆಚರಣೆಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.