ಮುದಗಲ್ಲ ವರದಿ..
ಭಕ್ತರ ಆರಾಧ್ಯ ದೈವ ಸಜ್ಜಲಶ್ರೀ ಶರಣಮ್ಮ:- ಅಭಿನವ ಚನ್ನಬಸವ ಶಿವಾಚಾಯ೯ರು..
ಮುದಗಲ್ಲ :- ಐತಿಹಾಸಿಕ ಮುದಗಲ್ಲ ಪಟ್ಟಣದ ಕುಂಬಾರ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ರಥೋತ್ಸವ ಹಾಗೂ ವಿಶ್ವ ಗುರು ಬಸವಣ್ಣ ನವರ ಜಯಂತ್ಯೋತ್ಸವ ಅಂಗವಾಗಿ ಜಗನ್ಮಾತೆ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯವರ
ಎಂಟನೇ ದಿನ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶಿವ ಶರಣೆ ಶರಣಮ್ಮ ಲೋಕ ಕಲ್ಯಾಣಕ್ಕಾಗಿ ದೈವತ್ವದ ಹಾದಿ ಹಿಡಿದವರು.
ಬಾಲ್ಯದಲ್ಲಿಯೇ ವೈರಾಗ್ಯತಾಳಿ ಗುರುವಿನ ಕೃಪೆಗೆ ಪಾತ್ರರಾದರು. ಇವರು ಪ್ರಚಾರ ಪ್ರತಿಷ್ಠೆಗೆಂದು ಬೆಲೆ ಕೊಟ್ಟವರಲ್ಲ ಜಾತಿ, ಮತ, ಮೇಲು-ಕೀಳು ಎಂಬ ಭಾವನೆ ಇವರಲ್ಲಿ ಇಲ್ಲ. ದೀನ-ದಲಿತ ಜತೆ ಬಾಳಿ ಬದುಕು ಸಾಗಿಸಿ ಅವರ ಕಲ್ಯಾಣಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದವರು.
ಈ ಭಾಗದ ಜನರಲ್ಲಿ 12 ನೇ ಶತಮಾನದ ಬಸವಾದಿ ಶರಣರ ಮೌಲ್ಯಗಳನ್ನು ಅವರ ಜೀವನದಲ್ಲಿ ತುಂಬಿ ಸಾಂಸ್ಕೃತಿಕ ಬೆಳವಣಿಗೆಗೆ ಬುನಾದಿ ಹಾಕಿದರು.
ಶರಣಮ್ಮನವರು ಕ್ರಿ.ಶ.1881ರಲ್ಲಿ ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದ ಲಿಂಗಣ್ಣ ಹಾಗೂ ಲಿಂಗಮ್ಮ ಎಂಬ ಹಾಲುಮತ ಕುಟುಂಬದ ದಂಪತಿಗಳ ಉದರದಿಯಲ್ಲಿ ಜನಿಸಿದರು.
ಮೂಲ ಹೆಸರು ಯಮುನಮ್ಮ. ಗುಡದೂರ ಗ್ರಾಮದ ದೊಡ್ಡಬಸವಾರ್ಯ ಶರಣರಿಂದ ಲಿಂಗ ದೀಕ್ಷೆ ಪಡೆದರು. ಲಿಂಗ ನಿಷ್ಠೆ, ವೈರಾಗ್ಯ, ಅಖಂಡ ಬ್ರಹ್ಮಚರ್ಯಗಳಿಂದ ಶಿವಾನುಭವದ ಜ್ಞಾನ ಪಡೆದು ಶಿವಯೋಗಿನಿಯಾದರು.
ಬಡವರ,ದೀನ ದಲಿತರ ಕಷ್ಟ ಕಾರ್ಪಣ್ಯ, ರೈತರ ಗೋಳು, ಇವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದವು. ದೇವರ ಪೂಜೆ, ಧ್ಯಾನ, ತಪಸ್ಸಿನಲ್ಲಿ ಹೆಚ್ಚು ಕಾಲಕಳೆದ ಅಮ್ಮ, ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದವರು.
ಶರಣಮ್ಮನವರು ಹಳ್ಳಿಯ ಪರಿಸರದಲ್ಲಿದ್ದು, ಸುತ್ತಲಿನ ಗ್ರಾಮದ ಜನರ ಶಿಕ್ಷಣದ ಬಗ್ಗೆ ಚಿಂತಿಸಿ ಮಠದಲ್ಲಿ ಶಾಲೆ, ಕಾಲೇಜುಗಳು ಸ್ಥಾಪಿಸುವುದಕ್ಕೆ ಶ್ರಮಿಸಿದರು. ಮಠದಲ್ಲಿ ಅಲ್ಲದೇ ವಿಜಯಪುರದಲ್ಲಿ ಸಜ್ಜಲಶ್ರೀ ಪ್ರಾಥಮಿಕ ಶಾಲೆ, ಬಾಗಲಕೋಟೆ ಜಿಲ್ಲೆಯ ಕಂಬಳಿಹಾಳ ಗ್ರಾಮದಲ್ಲಿ ಶರಣಮ್ಮ ತಾಯಿಯವರ ಪ್ರೌಢ ಶಾಲೆ, ಐಟಿಐ ಕಾಲೇಜು, ಕಂದಗಲ್ ಗ್ರಾಮದಲ್ಲಿ ಸಜ್ಜಲಶ್ರೀ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಮಾನ್ವಿ ತಾಲ್ಲೂಕಿನ ಸಿರವಾರದಲ್ಲಿ ಪ್ರಾಥಮಿಕ ಶಾಲೆಗಳನ್ನು ಸ್ಥಾಪನೆ ಮಾಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತಿದ್ದಾರೆ ಎಂದು ಜಗನ್ಮಾತೆ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯ ಎಂಟನೇ ದಿನ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅಭಿನವ ಚನ್ನಬಸವ ಶಿವಾಚಾಯ೯ರು ಅಮೃತ ವಾಣಿಯಲ್ಲಿ ನಡೆಯಿತು 1000 ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದು ಕುಂಡು ಬಂದಿತ್ತು.
ವರದಿ:- ಮಂಜುನಾಥ ಕುಂಬಾರ