ಮುದಗಲ್ಲ ವರದಿ..ಡಾ
!! ಬಾಬು ಜಗ ಜೀವನ್ ರಾವ್ ಹಾಗೂ ಡಾ!! ಅಂಬೇಡ್ಕರ್ ಜಯಂತ್ಯೋತ್ಸವ ಸ್ವಾಭಿಮಾನ ಸಮಾರಂಭ ಯಶಸ್ಸು..
ಮುದಗಲ್ಲ : ಇಲ್ಲಿನ ಪುರಸಭೆಯ ರಂಗ ಮಂದಿರದಲ್ಲಿ ಸೋಮವಾರ ಡಾ. ಬಾಬು ಜಗಜೀವನ್ ರಾಮ್ 118 ನೇ ಜಯಂತಿ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದ ಸ್ವಾಭಿಮಾನ ಕಾರ್ಯಕ್ರಮ ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಪ್ರೊಫೆಸರ್ ಬಿ ಕೃಷ್ಣಪ್ಪ ) ಸ್ಥಾಪಿತ ಸಂಘಟನೆ ವತಿಯಿಂದ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರ ಊರಿನ ಪ್ರಮುಖ ಬೀದಿಗಳಲ್ಲಿ ಸಾರೋಟಿನಲ್ಲಿರಿಸಿ ಹಲಗೆ ಕಲಾ ತಂಡಗಳು, ವಾದ್ಯ ಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಸಾಯಂಕಾಲದ ಪುರಸಭೆ ರಂಗಮಂದಿರದಲ್ಲಿ ಗಣ್ಯರಿಂದ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಂ ಅವರ ಭಾವ ಚಿತ್ರಗಳಿಗೆ ಗಣ್ಯರಿಂದ ಹೂಮಾಲೆ ಹಾಕಿ ನಮನ ಸಲ್ಲಿಸಲಾಯಿತು ಹಾಗೂ ವೇದಿಕೆಯ ಮೇಲೆ ಇದ್ದ ಗಣ್ಯರಾದ ವಿಧಾನ ಪರಿಷತ್ ಸದಸ್ಯರಾದ ವಸಂತ್ ಕುಮಾರ್ , ಅಮರೇಗೌಡ ಪಾಟೀಲ್ , ಡಿ.ಎಸ್ ಹೂಲಿಗೇರಿ, ಹೆಣ್ಣೂರು ಶ್ರೀಶನಿವಾಸ, ಮಹಾದೇವಮ್ಮ ಗುತ್ತೇದಾರ ,ಪ್ರೋ ಸಿ.ಕೆ ಮಹೇಶ್ , ಗಣ್ಯರು ಸಮಾರಂಭ ಕ್ಕೆ ಸಸಿಗಳಿಗೆ ನೀರು ಹಾಕುವ ಮುಖಾಂತರ ಸ್ವಾಭಿಮಾನ ಸಮಾರಂಭ ಕ್ಕೆ ಚಾಲನೆ ನೀಡಿದರು.
ಕಾಯ೯ಕ್ರಮ ಉದ್ಘಾಟನೆ ಮಾಡಿ
ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಾದ ವಸಂತ ಕುಮಾರ್ ಅವರು ಶಿಕ್ಷಣ, ಸಮಾನತೆಯಿಂದ ಉತ್ತಮ ಸಾಧನೆ ಸಾಧ್ಯ ಎಂದು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಯುವ ಜನತೆ ಅಂಬೇಡ್ಕರ್ ಅವರ ಸಾಧನೆ, ಜೀವನ ಶೈಲಿಯನ್ನು ಮಾದರಿಯಾಗಿಟ್ಟುಕೊಂಡು ಸಾಧನೆಯತ್ತ ಸಾಗಬೇಕು ಎಂದರು.
ಜಾತಿ, ಲಿಂಗ, ಧರ್ಮದ ತಾರತಮ್ಯವಿಲ್ಲದೆ ವಯಸ್ಸಿನ ಆಧಾರದಲ್ಲಿ ಮತದಾನದ ಹಕ್ಕನ್ನು ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದ್ದಾರೆ. ಜೀವಮಾನವನ್ನು ರಾಷ್ಟ್ರ ಸಂವಿಧಾನಕ್ಕಾಗಿ ಮುಡುಪಾಗಿಟ್ಟಿದ್ದರು ಎಂದರು.
ನಂತರ ಮಾತನಾಡಿದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಜಾತಿ, ಲಿಂಗ, ಧರ್ಮದ ತಾರತಮ್ಯವಿಲ್ಲದೆ ವಯಸ್ಸಿನ ಆಧಾರದಲ್ಲಿ ಮತದಾನದ ಹಕ್ಕನ್ನು ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದ್ದಾರೆ. ಜೀವಮಾನವನ್ನು ರಾಷ್ಟ್ರ ಸಂವಿಧಾನಕ್ಕಾಗಿ ಮುಡುಪಾಗಿಟ್ಟಿದ್ದರು ಎಂದರು.
ನಂತರ ಮಾತನಾಡಿದ ಪ್ರೋ ಸಿ.ಕೆ ಮಹೇಶ್ ಚಿತ್ರದುರ್ಗ ಅವರು
: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಜಗಜೀವನ ರಾಂ ಅವರು ನಮ್ಮ ದೇಶದ ಹೆಮ್ಮೆಯ ಪುತ್ರರು. ಅವರ ತತ್ವ ಚಿಂತನೆಗಳನ್ನು ವಿಶ್ವಕ್ಕೆ ಸಾರೋಣ ಎಂದು ಡಾ. ಅಂಬೇಡ್ಕರ್ ಅವರ ಮೇಲೆ ಸಂಶೋಧನಾ ಪ್ರಬಂಧಗಳು ಮಂಡನೆಯಾದಷ್ಟು ಯಾವ ಮಹಾಪುರುಷರ ಮೇಲೆಯೂ ಆಗಲಿಲ್ಲ. ಸಾಮಾಜಿಕ ಅಸಮಾನತೆ, ಬಡತನ, ಅನ್ಯಾಯ, ಅಧರ್ಮ, ಅಸ್ಪಶ್ಯತೆ, ಶೋಷಣೆ, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ ಡಾ. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಡಾ. ಬಾಬು ಜಗಜೀವನ ರಾಂ ಅವರು ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ ಎಂದರು.
ನಂತರ ಮಾತನಾಡಿದ ಶ್ರೀ ಹೆಣ್ಣೂರು ಶ್ರೀ ನಿವಾಸ
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಬಲದಿಂದಲೇ ದೇಶದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ದೇಶದ ಪ್ರಜಾವ್ಯವಸ್ಥೆಗೆ ಭದ್ರ ಬುನಾದಿಯನ್ನು ಕಲ್ಪಿಸುವಂತಹ ಸಂವಿಧಾನವನ್ನು ನೀಡಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಅವರ ವಿಚಾರಧಾರೆಯನ್ನು ಅವಲೋಕನ ಮಾಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಈ ಎರಡೂ ಮಹಾನ್ ಸಾಧಕರ ವಿಚಾರಗಳ ಚಿಂತನೆ ಕೇವಲ ಅವರ ಜಯಂತಿಗೆ ಮಾತ್ರ ಸೀಮಿತಗೊಳಿಸದೇ ನಿರಂತರವಾಗಿ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಡಿ.ಎಸ್ ಹೂಲಗೇರಿ , ಪಾಮಯ್ಯ ಮುರಾರಿ, ಇತರರು ಗಣ್ಯರು ಮಾತನಾಡಿದ್ದರು
ಈ ಸಂದರ್ಭದಲ್ಲಿ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ ,ಆನಂದ ಪೇಂಟರ್ ಸಂಗಪ್ಪ ಹಿರೇಮನಿ, ದುರಗಪ್ಪ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಶ್ಯಾಮಣ್ಣ ಕಟ್ಟಿಮನಿ, ರಾಮಲಿಂಗಪ್ಪ ಆದಿಮನಿ , ವೆಂಕಟೇಶ್ ಹಿರೇಮನಿ, , ಮಲೇಶ ,ಹನುಮಂತ ಬಿಲಿ, ರವಿ ಕಟ್ಟಿಮನಿ ,ನಾಗರಜ್ ಕಟ್ಟಿಮನಿ, ಮೋಹನ್ ಬಂಡಾರಿ, ಸಂತೋಷ ಕುಮಾರ್, ಪ್ರಕಾಶ ಬಡಿಗೇರ್
ರಮೇಶ ಬಂಕದಮನಿ, ಇತರರು ಉಪಸ್ಥಿತರಿದ್ದರು.