ವಿಧಾನಸಭೆ ಚುನಾವಣೆ 2023 : ಟಿಕೆಟ್ ಹಂಚಿಕೆ ವಿಚಾರದಲ್ಲಿ ಈ ಬಾರಿ ಬಿಜೆಪಿ ವಿಶೇಷ ಪ್ರಯತ್ನ

You are currently viewing ವಿಧಾನಸಭೆ ಚುನಾವಣೆ 2023 : ಟಿಕೆಟ್ ಹಂಚಿಕೆ ವಿಚಾರದಲ್ಲಿ ಈ ಬಾರಿ ಬಿಜೆಪಿ ವಿಶೇಷ ಪ್ರಯತ್ನ

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಒಟ್ಟು 224 ಕ್ಷೇತ್ರಗಳ ಪೈಕಿ ಬಿಜೆಪಿವು ಇದೀಗ ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ 9 ಮಂದಿ ವೈದ್ಯರು, 5 ಜನ ವಕೀಲರು, ಒಬ್ಬ ನಿವೃತ್ತ ಐಎಎಸ್, ಒಬ್ಬ ನಿವೃತ್ತ ಐಪಿಎಸ್ ಅಧಿಕಾರಿಗೆ ಟಿಕೆಟ್ ನೀಡಲಾಗಿದೆ. ಇದರ ಜೊತೆಗೆ 31 ಮಂದಿ ಸ್ನಾತಕೋತ್ತರ ಪದವೀಧರು, 3 ಶಿಕ್ಷಣ ತಜ್ಞರು, ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳು, 8 ಸಾಮಾಜಿಕ ಹೋರಾಟಗಾರರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಈ ಬಾರಿ ಬಿಜೆಪಿ ವಿಶೇಷ ಪ್ರಯತ್ನ ಮಾಡಿದೆ.

ಈಗ ಬಿಜೆಪಿ ಬಿಡುಗಡೆ ಮಾಡಿರುವ 189 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ 52 ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದ್ದು, ಈ ಮೊದಲ ಪಟ್ಟಿಯಲ್ಲಿ 8 ಮಂದಿ ಮಹಿಳೆಯರಿದ್ದಾರೆ. 32 ಮಂದಿ ಹಿಂದುಳಿದ ವರ್ಗದವರಿಗೆ ಟಿಕೆಟ್‌ ಕೊಟ್ಟರೇ, ಇನ್ನು 30 ಮಂದಿ ಪರಿಶಿಷ್ಟ ಜಾತಿ ಹಾಗೂ 16 ಜನರಿಗೆ ಪರಿಶಿಷ್ಟ ಪಂಗಡದವರಿಗೆ ಟಿಕೆಟ್ ನೀಡಲಾಗಿದೆ. ರಾಜ್ಯ ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊಸ ತಂತ್ರ ರೂಪಿಸಿದೆ.

Leave a Reply

error: Content is protected !!