ಪತ್ರಕರ್ತ ರಮೇಶ ರಾಜೂರು ನಿಧನ

ಕುಕನೂರು: ಪಟ್ಟಣದ ಜಗಜೀವನ ರಾಮ್ ನಗರದ ನಿವಾಸಿ ರಮೇಶ ರಾಜೂರು (ಉಜ್ಜಮ್ಮನವರ) ಇಂದು ಮದ್ಯಾಹ್ನ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತಿದ್ದೇವೆ.
ರಮೇಶ ರಾಜೂರು ಅವರು ಸುಮಾರು 10 ವರ್ಷಗಳ ಕಾಲ ಯಲಬುರ್ಗಾ ತಾಲೂಕಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಯಲಬುರ್ಗಾ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ತಾಲೂಕಿನ ಎಲ್ಲಾ ಪತ್ರಕರ್ತರ ಜೊತೆಗೆ ಒಳ್ಳೆಯ ಒಡನಾಟವನ್ನು ಹೊಂದಿದ್ದು ಸ್ನೇಹ ಜೀವಿಯಾಗಿದ್ದರು ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಗುರುವಾರ ಪಟ್ಟಣದಲ್ಲಿ ನಿಧನ ಹೊಂದಿದ್ದಾರೆ.
ಇವರ ಅಗಲಿಕೆಗೆ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ಯಲಬುರ್ಗಾ ತಾಲೂಕ ಅಧ್ಯಕ್ಷರು ಹಾಗೂ ಕುಕನೂರು ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಕಾ.ನಿ.ಪ. ಧ್ವನಿ ಸಂಘದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಮತ್ತು ತಾಲೂಕಿನ ಎಲ್ಲ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!