ಕುಕುನೂರು : ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಲ್ಲ, ಇದೀಗ ರಾಜ್ಯ ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಡಬ್ಬಿ ಬಾರಿಸುತ್ತಾ ನಾವು ಅಭಿವೃದ್ಧಿ ಮಾಡುತ್ತೇವೆ ನಮಗೆ ಮತ ನೀಡಿ ಎಂದು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು .
ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ರವಿವಾರ ಬಿಜೆಪಿ ಪ್ರಚಾರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಮಹಿಳಾ ಪ್ರಧಾನಿಗೆ ಮಹಿಳೆಯರ ಕಷ್ಟ ಅವರಿಗೆ ಗೊತ್ತಿಲ್ಲ ಅವರು ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಟ್ಟು ಹುಟ್ಟಿದವರು. ಮೋದಿಯವರು ಪ್ರಧಾನಿ ಯಾದ ಮೇಲೆ ಮಹಿಳೆಯರಿಗೆ 9 ಕೋಟಿ ಉಚಿತ ಗ್ಯಾಸ್ ನೀಡಿದ್ದಾರೆ. ಹಿಂದೆ ಲಸಿಕೆಗಾಗಿ ಬೇರೆ ದೇಶ ಅವಲಂಬಿಸಿದ್ದ ನಮ್ಮ ಭಾರತ, ಕೋವಿಡ್ ಸಂದರ್ಭದಲ್ಲಿ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇದ್ದು, ದೇಶದ ಪರಸ್ಥಿತಿ ನಿಯಂತ್ರಿಸಿ ಜಗತ್ತಿಗೆ ಮಾದರಿಯಾಗಿತ್ತು. ಅಲ್ಲದೇ 50 ರಿಂದ 60 ದೇಶಗಳಿಗೆ ಲಸಿಕೆ ನೀಡಿ ಬಡ ದೇಶಗಳ ಆಪತ್ತು ಬಾಂಧವರಾಗಿದ್ದಾರೆ ಪ್ರಧಾನಿ ನರೇಂದ್ರಮೋದಿಯವರು. ರಾಜ್ಯದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಮಹಿಳೆಯರಿಗಾಗಿ ವಿಶೇಷವಾಗಿ ಒಂದು ಸಾವಿರ ಕೋಟಿಯ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ಹಾಗೂ ಉಚಿತ ಪಾಸ್ ನೀಡಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಹೀಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಜನಪರ ಸೇವೆಗಳನ್ನು ಮಾಡುತ್ತಾ ಬಂದಿರುವ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ಬಾರಿ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿ ಗೆ ಮತ ನೀಡಿ ನನಗೆ ನಿಮ್ಮ ಆಶೀರ್ವಾದ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಳಕಪ್ಪ ಕಂಬಳಿ ಯಲಬುರ್ಗಾ ಮಂಡಲದ ಬಿಜೆಪಿ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ರತನ್ ದೇಸಾಯಿ, ಹಂಚಳಪ್ಪ ತಳವಾರ್, ಈಶಪ್ಪ ಆರೇರ, ಚಂದ್ರಕಾಂತ ಅರೇರೆ, ಪ್ರಕಾಶ್ ದಾಸರ, ಹಾಗೂ ಬಿಜೆಪಿ ಮಹಿಳಾ ಘಟಕದ ಉಮಾಮಹೇಶ್ವರಿ ಸಾವಳಗಿಮಠ ಶಕುಂತಲಮ್ಮ ಹಾಗೂ ಗ್ರಾಮದ ಬಿಜೆಪಿ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.