BREAKING : ಬಿಜೆಪಿಯಿಂದ ಮೂರನೇ ಪಟ್ಟಿ ಬಿಡುಗಡೆ

You are currently viewing BREAKING : ಬಿಜೆಪಿಯಿಂದ ಮೂರನೇ ಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇ 2 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇಂದು ಬಾಕಿ 12 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಬಗ್ಗೆ ಬಿಜೆಪಿಯಿಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸೇಡಂ ಕ್ಷೇತ್ರಕ್ಕೆ ರಾಜ್ ಕುಮಾರ್ ಪಾಟೀಲ್, ಕೊಪ್ಪಳ್ಳ ಕ್ಷೇತ್ರಕ್ಕೆ ಮಂಜುಳಾ ಅಮರೇಶ್, ರೋಣಾ – ಕಲಕಪ್ಪ ಬಂಡಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಟಿಯಿಗೆ ಟಿಕೆಟ್ ನೀಡಲಾಗಿದೆ. ಇವರುಗಳ ಜೊತೆಗೆ ಇನ್ನೂ ಹೆಬ್ಬಾಳಕ್ಕೆ ಕಟ್ಟಾ ಜಗದೀಶ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಉಮೇಶ್ ಶೆಟ್ಟಿ, ಮಹದೇವಪುರ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಮಂಜುಳ ಅರವಿಂದ ಲಿಂಬಾವಳಿ ಹಾಗೂ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಶ್ರೀವತ್ಸಗೆ ಟಿಕೆಟ್ ನೀಡಿ ಆದೇಶ ಹೊರಡಿಸಿದೆ.

Leave a Reply

error: Content is protected !!