BREAKING : ಇಂದಿನಿಂದ ಬಿಜೆಪಿ ಚುನಾವಣಾ ಪ್ರಚಾರಕ್ಕೆ ನಟ ಕಿಚ್ಚ ಸುದೀಪ್ ಎಂಟ್ರಿ..!!

You are currently viewing BREAKING : ಇಂದಿನಿಂದ ಬಿಜೆಪಿ ಚುನಾವಣಾ ಪ್ರಚಾರಕ್ಕೆ ನಟ ಕಿಚ್ಚ ಸುದೀಪ್ ಎಂಟ್ರಿ..!!

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ಕಾವೇರಿದ್ದು, ಇದೀಗ ಇದಕ್ಕೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಇಂದಿನಿಂದ (ಏಪ್ರಿಲ್ 18) ಬಿಜೆಪಿ ಪ್ರಚಾರ ಶುರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನ ಉಳಿದಿವೆ. ಈ ಹಿನ್ನೆಲೆ ನಟ ಸುದೀಪ್ ಅವರು ಇಂದಿನಿಂದ ಚುನಾವಣೆ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಳೆಯಿಂದ (ಏಪ್ರಿಲ್ 19) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ನಾಳೆ ಶಿಗ್ಗಾಂವಿನಲ್ಲಿ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಎನ್ನಲಾಗಿದೆ.

ನಟ ಕಿಚ್ಚ ಸುದೀಪ್ ಅವರು ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿಗೆ ಬಲ ಸಿಕ್ಕಂತೆ ಆಗಿದೆ. ಮಾಮಾ (ಮುಖ್ಯಮಂತ್ರಿ) ಹೇಳಿದವರ ಪರವಾಗಿ ನಾನು ಪ್ರಚಾರ ಮಾಡ್ತೀನಿ ಎಂದು ಈ ಹಿಂದೆ ಸುದೀಪ್ ಭರವಸೆ ನೀಡಿದ್ದಾರೆ. ಕಳೆದ ಏಪ್ರಿಲ್ 14ರಿಂದ ಸುದೀಪ್ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಿಚ್ಚ ಈವರೆಗೆ ಕ್ಯಾಂಪೇನ್​ಗೆ ಇಳಿದಿರಲಿಲ್ಲ.

ನಟ ಸುದೀಪ್ ಅವರು ಇಂದಿನಿಂದ (ಏಪ್ರಿಲ್ 18) ನಿರಂತರವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಇಂದು ಮುಧೋಳ ಹಾಗು ಬೀಳಗಿ ಕ್ಷೇತ್ರಗಳಲ್ಲಿ ಸುದೀಪ್ ಮತಬೇಟೆಗೆ ಇಳಿಯಲಿದ್ದಾರೆ ಎಂದು ಎನ್ನಲಾಗಿದೆ.

Leave a Reply

error: Content is protected !!