ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಇಂದಿನಿಂದ ಮೇ 7ರವರೆಗೆ ಬಿಜೆಪಿ ಚುನಾವಣಾ ಪ್ರಚಾರ ಶುರು ಮಾಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ‘ಚುನಾವಣೆ ಪ್ರಚಾರ ನನಗೆ ಹೊಸದಲ್ಲ. ಈ ಹಿಂದೆಯೂ ನನ್ನ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೇನೆ. ಶಿಗ್ಗಾಂವಿ ಕ್ಷೇತ್ರದಿಂದ ಚುನಾವಣಾ ಪ್ರಚಾರ ಶುರು ಮಾಡುತ್ತೇನೆ ಎಂದು ಹೇಳಿದ್ದಾರೆ.
ನಟ ಕಿಚ್ಚ ಸುದೀಪ್ ಚುನಾವಣಾ ಪ್ರಚಾರದ ವಿಶೇಷತೆಗಳು ಏನಿರಲಿದೆ ಗೊತ್ತಾ?
ಪಾದಯಾತ್ರೆ, ರೋಡ್ ಶೋ, ಬೈಕ್ ರೈಡ್ ಎಲ್ಲವೂ ಈ ಚುನಾವಣೆ ಪ್ರಚಾರ ಇರುತ್ತದೆ. ಬೇರೆ ಕಡೆಯಿಂದಲೂ ನನಗೆ ಚುನಾವಣಾ ಪ್ರಚಾರಕ್ಕೆ ಕೇಳಿದ್ದರು. ಪ್ರತಿ ಬಾರಿಯೂ ಕೇಳ್ತಾರೆ. ಅದರಂತೆ ಈ ಬಾರಿಯೂ ಕೇಳಿದ್ದಾರೆ ಎಂದು ಹೇಳಿದ್ದಾರೆ.