ಕುಕನೂರ : ಅಧಿಕಾರಕ್ಕಾಗಿ ನಾನು ರಾಜಕೀಯಕ್ಕೆ ಬಂದವನಲ್ಲ, ಸಮಾಜ ಸೇವೆಗಾಗಿ ತಾಲೂಕನ್ನು ಅಭಿವೃದ್ಧಿ ಪದದತ್ತ ಕೊಂಡೊಯ್ಯಲು ರಾಜಕೀಯಕ್ಕೆ ಬಂದಿದ್ದೇನೆ, ರಾಜಕೀಯದಲ್ಲಿ ಅಭಿವೃದ್ಧಿಯೇ ನನ್ನ ಮಂತ್ರ, ಅಭಿವೃದ್ಧಿಗಳೇ ಚುನಾವಣೆಯ ಮಾನದಂಡಗಳು ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ 2023ರ ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕೊಡುಗೆಗಳನ್ನು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಅವರು, 1985 ರಿಂದ ಇಲ್ಲಿಯವರೆಗೆ ತಮ್ಮ ಕಾಲಾವಧಿಯಲ್ಲಿ ಆದ ಶೈಕ್ಷಣಿಕ ಅಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ, ಆರೋಗ್ಯ ಇಲಾಖೆಯಲ್ಲಿ ಆದ ಅಭಿವೃದ್ಧಿ , ಕುಡಿಯುವ ನೀರಿನ ಯೋಜನೆ, ವಿದ್ಯುತ್ , ಸಾರಿಗೆ ಇಲಾಖೆ ಹಾಗೂ 1996 ರಿಂದ 98 ರಲ್ಲಿ ಕೊಪ್ಪಳ ಲೋಕಸಭಾ ಸದಸ್ಯರಾಗಿ ಕೈಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳಾದ ರೈಲ್ವೆ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿಗಳು ಕುರಿತು ಮಾತನಾಡಿದರು.
ನಂತರ ಭವಿಷ್ಯದಲ್ಲಿ ಶಾಸಕರಾದ ಮೇಲೆ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳು
1.ಕೃಷ್ಣ ಬಿ ಸ್ಕೀಮ್ ನೀರಾವರಿ ಯೋಜನೆಯನ್ನು ಸುಪ್ರೀಂ ಕೋರ್ಟ್ನಿಂದ ತಡೆ. ಯಜ್ಞ ತೆರೆವುಗೊಳಿಸಿ ಈ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಪರಿವರ್ತಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
2.ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ಜನಜಾನುವಾರುಗಳಿಗೆ ಕುಡಿಯುವ ನೀರು ಸೌಲಭ್ಯ ನೀಡಲು ಹೊಸಕೆರೆಗಳನ್ನು ಸ್ಥಾಪಿಸುವುದು ಮತ್ತು ಕಳೆದ ಬಾರಿಗಿಂತ ಹೆಚ್ಚಿನ ಕೆರೆಗಳಿಗೆ ವಿವಿಧ ನದಿಗಳಿಂದ ನೀರು ತುಂಬಿಸಲಾಗುವುದು.
3.ಯಲ್ಬುರ್ಗಾ ಹಾಗೂ ಕುಕ್ನೂರು ತಾಲೂಕಿನ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸುವುದು.
4.ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ವಿದ್ಯಾಕೇಂದ್ರಗಳಲ್ಲಿ ಕ್ಯಾಂಪಸ್ ಸಂದರ್ಶನ ಕ್ರಮ ಕೈಗೊಳ್ಳಲಾಗುವುದು.
5.ಅವಳಿ ತಾಲೂಕಿನಲ್ಲಿ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು.
6.ಕ್ಷೇತ್ರದಲ್ಲಿ ಕ್ರೀಡಾಂಗಣ ಅಭಿವೃದ್ದಿ ಹಾಗೂ ಕ್ರೀಡಾ ತರಬೇತಿಗೆ ಆದ್ಯತೆ ನೀಡಲಾಗುವುದು.
7.ರೈತರಿಗೆ ನೆರವಾಗಲು ಕೃಷಿ ಮತ್ತು ತೋಟಗಾರಿಕೆ ವಲಯಕ್ಕೆ ಸಂಸ್ಕಾರ ಘಟಕವನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದು.
8.ತಾಲೂಕಿನ ಅತ್ಯಂತ ಅವಶ್ಯಕತೆ ಇರುವೆಗಳಲ್ಲಿ ಹೊಸ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು.
9.ಕ್ಷೇತ್ರದಲ್ಲಿ ಉದ್ಯೋಗವಕಾಶ ಹೆಚ್ಚಿಸಲು ವಿಶೇಷ ಆರ್ಥಿಕ ವಲಯ ಕೈಗಾರಿಕಾ ವಲಯ ನಿರ್ಮಿಸಲಾಗುವುದು.
10.ಕ್ಷೇತ್ರದಲ್ಲಿರುವ ರಸ್ತೆಗಳನ್ನು ಮೇಲ್ಗಡೆ ಜಿಗಿರಿಸುವುದು ಹಾಗೂ ರೈತರ ಉಪಯೋಗ ರಸ್ತೆಗಳನ್ನು ನಿರ್ಮಿಸುವುದು.
11.ತಾಲೂಕಿನ ಪ್ರಮುಖ ಹಳ್ಳಿಗಳಲ್ಲಿ ಚೆಕ್ಡಾಂ ನಿರ್ಮಿಸಲು ಕ್ರಮ ಕೈಗೊಳ್ಳುವುದು.
12.ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿ. ಅಂಗವಿಕಲರಿಗೆ ವಾಹನಗಳನ್ನು ಒದಗಿಸುವುದು.
ಈ ಅಂಶಗಳು ನನ್ನ ಭವಿಷ್ಯದ ಅಭಿವೃದ್ಧಿ ಯೋಜನೆಗಳಾಗಿವೆ. ಚುನಾವಣೆಗಳು ಅಭಿವೃದ್ಧಿಯ ಮಾನದಂಡಗಳಾಗಬೇಕು. ಇಲ್ಲಿ ಯಾವುದೇ ಮತ ಜಾತಿ ಧರ್ಮ ಹೇಳಿಕೊಂಡು ಮತ ಪಡೆಯಬಾರದು. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮಂತ್ರವಾಗಿದೆ ಹಾಗಾಗಿ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದ ಚಿನ್ನಿಗೆ ಮತ ಹಾಕಿ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ಕೊಡಿ ಎಂದು ಕೇಳಿದರು.