ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಭರದಿಂದ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಹಾಗೆಯೇ ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿವೈ ವಿಜಯೇಂದ್ರ ಅವರ ಪರ ಮೆರವಣಿಗೆಯಲ್ಲಿ ಕನ್ನಡದ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಶೃತಿಯ ಭಾಗವಹಿಸಿದ್ದರು. ಈ ವೇಳೆಯಲ್ಲಿ ನಟಿ ಶೃತಿಯ ಕೆನ್ನೆ ಹಿಂಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಪರೂಪ ಘಟನೆಯೊಂದು ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇಂದು ಶಿವಮೊಗ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಈ ವೇಳೆ ನಟಿ ಶ್ರುತಿ ಅವರು ಜನರತ್ತ ನಗುನಗುತ್ತಾ ಕೈ ಬೀಸುತ್ತಿದ್ದರು. ಆಗ ಪಕ್ಕದಲ್ಲೇ ಇದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶೃತಿ ಅವರನ್ನು ಅವರ ಕೆನ್ನೆ ಹಿಂಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ತಮ್ಮನ್ನು ಗಮನಿಸುತ್ತಿದ್ದಂತೆ ಕೈ ಮುಗಿದು ನಮಸ್ಕರಿಸಿದರು. ಶೃತಿ ಬಿಎಸ್‌ವೈ ಅವರ ಆಶೀರ್ವಾದಯನ್ನು ಪಡೆಯಲು ತಲೆ ಬಾಗಿಸಿದರು. ಆಗ ಶೃತಿ ಅವರ ತಲೆಗೆ ಕೈ ಹಾಕಿ ತುಂಬಾ ಆಪ್ತತೆಯಿಂದ ಕಿವಿಯಲ್ಲಿ ಬಿಎಸ್‌ವೈ ಏನೋ ಒಂದು ವಿಷಯ ಹೇಳಿದರು ಎನ್ನಾಗಿದೆ. ಆಗ ಶೃತಿ ಅವರು ಕೂಡ ಯಡಿಯೂರಪ್ಪ ಅವರ ಮಾತಿಗೆ ನಕ್ಕರು. ಇದನ್ನು ನೋಡಿದ ಕೆಲ ಅಭಿಮಾನಿಗಳು ಸಿಳ್ಳೆ ಕೇಕೆ ಹಾಕಿದರು.
ಈ ಬೃಹತ್ ಜಾಥಾದಲ್ಲಿ ಬಿಎಸ್‌ವೈ, ನಟಿ ಶೃತಿ, ಸಚಿವ ಎಂಟಿಬಿ ನಾಗರಾಜು, ಸಂಸದ ಉಮೇಶ್ ಜಾದವ್, ಶಾಸಕ ಪಿ ರಾಜೀವ್, ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಭಾಗಿಯಾಗಿದ್ದರು. ಈವರೆಗೆ ಶಿಕಾರಿಪುರ ಕ್ಷೇತ್ರವನ್ನು ಮಾಜಿ ಸಿಎಂ ಬಿಎಸ್‌ವೈ ಅವರು ಪ್ರತಿನಿಧಿಸುತ್ತಿದ್ದರು. ಇದೇ ಮೊದಲ ಬಾರಿಗೆ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದ ಚುನಾವಣಾ ರಣರಂಗಕ್ಕೆ ದುಮುಕಿದ್ದಾರೆ.