ಯಲಬುರ್ಗಾ : 2023ರ ಸಾರ್ವತ್ರಿಕ ಚುನಾವಣೆಗೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಅರ್ ಹರಿ ನಾಮಪತ್ರ ಸಲ್ಲಿಸಿದರು.
ಯಲಬುರ್ಗಾ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ
ವಿಶೇಷ ಪೂಜೆ ಸಲ್ಲಿಸಿ ಬಳಿಕ ತೆರೆದ ವಾಹನದಲ್ಲಿ ನೂರಾರು ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಕಾವ್ಯ ರಾಣಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಯಲಬುರ್ಗಾ ಕ್ಷೇತ್ರದ ಜನತೆಗೆ ಇದು ಬದಲಾವಣೆಯ ಸಮಯ, ಕ್ಷೇತ್ರದಲ್ಲಿ ಜಿಡ್ಡು ಹಿಡಿದಿರುವ ಆಡಳಿತವನ್ನು ಕಿತ್ತೆಸೆಯಲು ಏನ್,ಸಿ, ಪಿ ಪಕ್ಷದ ಗಡಿಯಾರ ಚಿನ್ನಗೆ ಮತ ನೀಡುವ ಮೂಲಕ ನನಗೆ ಈ ಕ್ಷೇತ್ರದ ಅಭಿವೃದ್ಧಿ ಮಾಡಲು ಅವಕಾಶ ನೀಡಬೇಕೆಂದರು.
ಎನ್.ಸಿ.ಪಿ ಯಿಂದ ಆರ್ ಹರಿ ನಾಮಪತ್ರ ಸಲ್ಲಿಕೆ.
