ಗಂಗಾವತಿ : ಕೆ ಆರ್ ಪಿ ಪಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಅವರು ಗುರುವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಮನೋಹರ್ ಗೌಡ ನಾಮಪತ್ರ ಸಲ್ಲಿಸಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮನೋಹರ್ ಗೌಡರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ, ‘ಅಮಾವಾಸ್ಯೆ ಪ್ರಯುಕ್ತ, ನನ್ನದೊಂದು ನಾಮಪತ್ರ ಪಕ್ಷೇತರ ಅಭ್ಯರ್ಥಿಯಾಗಿ ಇರಲಿ ಎಂಬ ಉದ್ದೇಶವನ್ನು ನಾವು ಹೊಂದಿದ್ದು, ಈ ಕಾರಣಕ್ಕಾಗಿ ನಮ್ಮ ಆತ್ಮೀಯ ಗೆಳೆಯರ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರೇಶ್ ಬಲಕುಂದಿ, ಡಿ.ರಮೇಶ್, ಮಲ್ಲಿಕಾರ್ಜುನ್ ನಂದಾಪುರ್, ರಾಜಶೇಖರ್, ರಮೇಶ ನಾಯಕ್, ಹೊಸಮಲ್ಲಿ ಇತರರು ಉಪಸ್ಥಿತರಿದ್ದರು..
ವರದಿ : ಹನುಮೇಶ ಬಟಾರಿ ಗಂಗಾವತಿ