BREAKING : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ರಾಜ್ಯದ ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

You are currently viewing BREAKING : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ರಾಜ್ಯದ ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಬೆಂಗಳೂರು : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ರಾಜ್ಯದಲ್ಲಿ ಶೇಕಡಾವಾರು 74.64 ಫಲಿತಾಂಶ ಬಂದಿದೆ. ಕಳೆದ ಬಾರಿ 61.88 ಫಲಿತಾಂಶ ಬಂದಿತ್ತು. ಹಾಗಾಗಿ ಈ ಬಾರಿಯ ಫಲಿತಾಂಶ ಉತ್ತಮವಾಗಿದೆ ಎಂದು ಕೆಎಸ್ ಇಎಬಿ ಅಧ್ಯಕ್ಷ ಡಾ.ರಾಮಚಂದ್ರನ್‌ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದರು. ರಾಜ್ಯದಲ್ಲಿ ಒಟ್ಟು 61 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು , ಈ ಬಾರಿ ಶೇಕಡಾವಾರು 74.64 ಮಂದಿ ಪಾಸಾಗಿದ್ದಾರೆ ಅಂತ ತಿಳಿಸಿದರು.
ಕಳೆದ ಮಾರ್ಚ್ 09 ರಿಂದ ಮಾರ್ಚ್ 29ರವರೆಗೆ ನಡೆದಿದ್ದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 3,63,698, ವಿದ್ಯಾರ್ಥಿನಿಯರು 3,62,497 ಸೇರಿ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಹೊಸಬರು 6.29 ಲಕ್ಷ ವಿದ್ಯಾರ್ಥಿಗಳು, ಖಾಸಗಿ 25,847 ವಿದ್ಯಾರ್ಥಿಗಳು, ಪುನರಾವರ್ತಿತ 70,589 ವಿದ್ಯಾರ್ಥಿಗಳು, ಕಲಾ ವಿಭಾಗ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗ 2,44,120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಅದೇ ರೀತಿ ಕೊನೆಯ ಸ್ಥಾನವನ್ನು ಯಾದಗಿರಿ ಜಿಲ್ಲೆ ಪಡೆದುಕೊಂಡಿದೆ. ಕೊಪ್ಪಳ ಜಿಲ್ಲೆ ಶೇಕಡಾವಾರು 74.80 ಪಡೆದು, 22 ನೇ ಸ್ಥಾನದಲ್ಲಿದೆ. ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ.

ಫಲಿತಾಂಶ ತಿಳಿದುಕೊಳ್ಳಲು ಇದನ್ನ ಕ್ಲಿಕ್ ಮಾಡಿ….
#karresults.nic.in

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದ ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply

error: Content is protected !!