ಬಿಜೆಪಿಯನ್ನೇ ಬೆಂಬಲಿಸುವುದಾಗಿ ಫೇಸ್ಬುಕ್ ಜಾಲತಾಣಗಳಲ್ಲಿ ಹೇಳಿಕೆ.
ಯಲಬುರ್ಗಾ :ಚುನಾವಣೆ ಘೋಷಣೆಗೂ ಮುನ್ನವೇ ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದ ಹಾಗೂ ಬಿಜೆಪಿಯ ಟಿಕೇಟ್ ಹಂಚಿಕೆ ನಂತರ ವರಿಷ್ಠರ ನಡೆಯಿಂದ ನನಗೆ ಸಿಗಬೇಕಿದ್ದ ಬಿಜೆಪಿ ಟಿಕೇಟ್ ದೊರೆಯದ ಹಿನ್ನಲೇ ಪಕ್ಷೇತರನಾಗಿ ೨೦೨೩ರ ವಿಧಾನಸಭಾ ಚುನಾವಣಗೆ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯನ್ನು ನೆಡಸಿ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳಲ್ಲ, ಪಕ್ಷೇತರನಾಗಿ ಸ್ಪರ್ಧೇ ಮಾಡುವುದು ಖಚಿತ ಎಂದು ಹೇಳಿದ್ದ ಶರಣಪ್ಪ ಗುಂಗಾಡಿ ಇದೀಗ ಚುನಾವಣೆಗೆ ನಾಮಪತ್ರ ಸಲ್ಲಿಸದೆ ಹಿಂದೆ ಸರಿದಿದ್ದಾರೆ.
ಬಿಜೆಪಿಯ ಟಿಕೆಟ್ ದೊರೆಯದ ಹಿನ್ನಲೆಯಲ್ಲಿ ಬೆಜೆಪಿಯ ನಾಯಕರನ್ನು ಹಾಗೂ ಹಾಲಿ ಸಚಿವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ “ ಹಾಲಪ್ಪ ಆಚಾರ್ ಅವರೇ ನೀವು ಎಷ್ಟು ಹೆಣಗಾಡಿ,ಪರದಾಡಿ ಟಿಕೆಟ್ ತಂದಿದ್ದೀರಿ ಎಂಬುದು ನನಗೆ ಗೊತ್ತಿದೆ. ದೆಹಲಿಯ ವರಿಷ್ಠರು ಅಂತಿಮ ಹಂತದಲ್ಲಿ ನನ್ನ ಹೆಸರನ್ನು ಯಾಕೆ ಬಿಟ್ಟರು ಎಂದು ತಿಳಿಯುತ್ತಿಲ್ಲ.” ಎಂದು ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದರು.
ಆದರೆ ನಾಮಪತ್ರ ಕೊನೆಯ ದಿನವಾದ ಗುರುವಾರ ನಾಮಪತ್ರ ಸಲ್ಲಿದೆ ಹಿಂದೆ ಸರಿದು ಮತ್ತೇ ತಮ್ಮ ಫೇಸ್ ಬುಕ್‌ನಲ್ಲಿ “ಆತ್ಮೀಯ ಹಿರಿಯರ ಸೂಚನೆ ಮೇರೆಗೆ ನಾಮಪತ್ರವನ್ನು ಸಲ್ಲಿಸಿರುವುದಿಲ್ಲ, ಬಿಜೆಪಿಯನ್ನೇ ಬೆಂಬಲಿಸುತ್ತೇನೆ”. ಎಂದು ಬರೆದುಕೊಂಡಿದ್ದಾರೆ.
ಇವರ ಈ ನೆಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆಗಳೂ ಸಹ ನೆಡೆಯುತ್ತಿವೆ.
ಈ ಕುರಿತು ಮಾಹಿತಿ ಪಡೆಯಲು ಸಾಕಷ್ಟು ಕರೆ ಮಾಡಿದರು ಕರೆಗೆ ಸ್ಪಂದಿಸುತ್ತಿಲ್ಲ.