ಕೊಪ್ಪಳ : ನಿನ್ನೆ ರಾತ್ರಿ ಕೊಪ್ಪಳ ತಾಲೂಕಿನಲ್ಲಿ ವ್ಯಕ್ತಿ ಓರ್ವನ ಮೇಲೆ ಭಾರಿವಾಹನ ಒಂದು ಹರಿದು ಹೋಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಕೊಪ್ಪಳ ತಾಲೂಕಿನ ಅಲ್ಲಾನಗರದ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಭಾರೀ ಗಾತ್ರದ ಲಾರಿವೊಂದರ ಡ್ರೈವರ್ ಮಧ್ಯಪಾನ ಮಾಡಿ ವಾಹನವನ್ನು ಚಲಾಯಿಸಿದ್ದಾನೆ. ಇದೇ ವೇಳೆ ಬೈಕ್ ಸವಾರ ಶಿವಯ್ಯ ಹಿರೇಮಠ (37) ಎಂಬುವರು ದಿನ ನಿತ್ಯದ ಹಾಗೇ ತನ್ನ ಹೆಂಡತಿಯನ್ನು ಅಂಗಡಿಯಿಂದ ಕರೆತರುವ ಮುನ್ನ ತನ್ನ ಹೆಂಡತಿಯನ್ನು ಮನೆಗೆ ಬಿಟ್ಟು ಮರಳಿ ಬರುವಾಗ ಈ ಘಟನೆ ನಡೆದಿದೆ. ಈ ಕೃತ್ಯ ಎಸೆಗಿದ ಆರೋಪಿಯನ್ನು ಬಂಧಿಸಿ, ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಕನಕಪ್ಪ ಕೆ. ತಳವಾರ, ಕೊಪ್ಪಳ