Good News : ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌..!!

You are currently viewing Good News : ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌..!!

ಬೆಂಗಳೂರು : ಕಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿವೃತ್ತ ಅಧಿಕಾರಿ ಹಾಗೂ ನೌಕರರಿಗೆ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡುವ ಸಲುವಾಗಿ ಇಂದು ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು (ಆಡಳಿತ ಸುಗಮಗೊಳಿಸಲು) ಕಡ್ಡಾಯಗೊಳಿಸಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್‌ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) (ನಿಯಮಗಳು 2012ನ್ನು ಅಧಿಸೂಚನೆ ಸಂಖ್ಯೆ: ಸಿಆಸುಇ 43 ಸೇವನ 2008 ದಿನಾಂಕ 07.03.2012ರಲ್ಲಿ ರೂಪಿಸಲಾಗಿದೆ.) ಸದರಿ ನಿಯಮಗಳು, 2012ರ ಮಾರ್ಚ್‌ 22ರಂದು ಜಾರಿಗೆ ಬಂದಿರುತ್ತದೆ. ಸದರಿ ನಿಯಮಗಳ ನಿಯಮ 3(3)ರಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸೇವಾನಿರತ ನೌಕರರಿಗೆ ಸರ್ಕಾರವು ಅಥವಾ ಸರ್ಕಾರದಿಂದ ಅನುಮೋದಿತ ಏಜೆನ್ಸಿಯು ನೀಡುವ ಪ್ರಮಾಣ ಪತ್ರವನ್ನು ಹಾಜರುಪಡಿಸುವುದಕ್ಕೆ ಒಳಪಟ್ಟು ರೂ. 5,000/-ಗಳ ಪ್ರೋತ್ಸಾಹ ಧನವನ್ನು ವೆಚ್ಚಭರಿಸಲು ಮಾಡಲು ಆಸ್ಪದ ಕಲ್ಪಿಸಲಾಗಿತ್ತು ಎಂದು ಆದೇಶದಲ್ಲಿ ತಿಳಿಸಿದೆ.

ಈ ಕುರಿತು ಸಂಬಂಧಿಸಿದಂತೆ ಉಲ್ಲೇಖ(1)ರ ಪತ್ರದಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ 2012ರ ಮಾರ್ಚ್‌ 22ರ ಸರ್ಕಾರದ ಅಧಿಸೂಚನೆ ಜಾರಿಗೆ ಬಂದಾಗ ಸೇವೆಯಲ್ಲಿದ್ದು, 2021 ಏಪ್ರಿಲ್ 17ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರಸ್ತುತ ನಿವೃತ್ತಿ ಹೊಂದಿರುವ ಅಧಿಕಾರಿ ಹಾಗೂ ನೌಕರರಿಗೆ ಪ್ರೋತ್ಸಾಹಧನ ಮಂಜೂರು ಮಾಡುವ ಬಗ್ಗೆ ಸ್ಪಷ್ಟಿಕರಣ ಕೋರಲಾಗಿದೆ.

2021 ಏಪ್ರಿಲ್ 17ರವರೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿವೃತ್ತ ಅಧಿಕಾರಿ ಹಾಗೂ ನೌಕರರು ಸೇರಿದಂತೆ ಎಲ್ಲ ಸೇನಾನಿರತ ನೌಕರರು ಸರ್ಕಾರಿ 2022ರ ಜನವರಿ24ರನ್ವಯ ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

Leave a Reply

error: Content is protected !!