ಕ್ಷೇತ್ರದ ಮತದಾರ ಪ್ರಭುಗಳ ಸೇವೆಗಾಗಿ ಮತ್ತೊಮ್ಮೆ ಹಾಲಪ್ಪ ಆಚಾರ್ ಗೆ ಅವಕಾಶ ಕೊಡಿ : C.H. ಪೊಲೀಸ್ ಪಾಟೀಲ.

You are currently viewing ಕ್ಷೇತ್ರದ ಮತದಾರ ಪ್ರಭುಗಳ ಸೇವೆಗಾಗಿ ಮತ್ತೊಮ್ಮೆ ಹಾಲಪ್ಪ ಆಚಾರ್ ಗೆ ಅವಕಾಶ ಕೊಡಿ : C.H. ಪೊಲೀಸ್ ಪಾಟೀಲ.

ಕುಕನೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರರು ಹಾಲಪ್ಪ ಆಚಾರ್ ಮತ ನೀಡುವ ಮೂಲಕ ಕ್ಷೇತ್ರದ ಮತದಾರ ಪ್ರಭುಗಳ ಸೇವೆಗಾಗಿ ಮತ್ತೋಮ್ಮೆ ಆಚಾರ್ ಅವಕಾಶ ಕೊಡಿ ಎಂದು ಸಿ.ಎಚ್.ಪೊಲೀಸ್ ಪಾಟೀಲ ಹೇಳಿದರು.
ಕರ್ನಾಟಕದ ವಿಧಾನಸಭೆಯ 2023 ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಹಾಲಪ್ಪ ಬಸಪ್ಪ ಆಚಾರ ಪರ ಕದ್ರಳ್ಳಿ, ಹಿರೇ ಬೀಡನಾಳ,ಮುತ್ತಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಬಿಜೆಪಿಯ ಹಿರಿಯ ಮುಖಂಡರಾದ ಸಿ.ಎಚ್.ಪೊಲೀಸ್ ಪಾಟೀಲ ಮಾತನಾಡಿ ನಮ್ಮ ಹಾಲಪ್ಪ ಆಚಾರ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಆದರಿಂದ ಮೇ10ಕರಂದು ನೆಡೆಯುವ ಚುನಾವಣೆಯಲ್ಲಿ ತಾವೆಲ್ಲರೂ ಕಮಲದ ಗುರುತಿಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು, ಅವರಿಂದ ಕ್ಷೇತ್ರದಲ್ಲಿ ಅವರಿಂದ ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸಗಳು ಅಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಭಾಜಪ ಮಂಡಲ ಅಧ್ಯಕ್ಷ ವಿಶ್ವನಾಥ್ ಮರಿಬಸಪ್ಪನವರ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಕಳಕಪ್ಪ ಕಂಬಳಿ, ಬಸವರಾಜ ತೊಂಡಿಹಾಳ, ಮುತ್ತು, ಕೊಟ್ರಪ್ಪ ತೋಟದ , ಈಶಣ್ಣ ಆರ್ಯರ, ಶಂಕ್ರಪ್ಪ ಸುರಪೂರು ವಕೀಲರು, ಅಯ್ಯಪ್ಪ ಗುಳೆ, ಗಾಳಿಪ್ಪ ಹಿರಿಯ ಮುಖಂಡರು, ಮಂಜುನಾಥ ಗಟ್ಟೆಪ್ಪನವರು, ಯಂಕರೆಡ್ಡಿ ಹಿರೇ ಬೀಡನಾಳ, ಗೌಡಪ್ಪ ಮುತ್ತಾಳ, ಬಸವನಗೌಡ ವಟಪರರ್ವಿ, ವೆಂಕಟೇಶ ಗಾದಿ, ಶಿವುಕುಮಾರ ಕದ್ರಳ್ಳಿ, ದ್ಯಾಮಣ್ಣ ಬೆವೂರು,ವಿಜಯ ದಾಸರ, ಹಾಗೂ ಇತರರಿದ್ದರು.

Leave a Reply

error: Content is protected !!