ರಂಜಾನ್ ಹಬ್ಬದ ಶುಭಾಶಯಗಳು ಕೋರಿದ KRPP ಅಭ್ಯರ್ಥಿ ಚಾರುಲ್

You are currently viewing ರಂಜಾನ್ ಹಬ್ಬದ ಶುಭಾಶಯಗಳು ಕೋರಿದ KRPP ಅಭ್ಯರ್ಥಿ ಚಾರುಲ್

ಕಾರಟಗಿ : ಇಂದು ಕಾರಟಗಿ ಪಟ್ಟಣದ ಈದ್ಗಾ ಮೈದಾನಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಡಾ.ಚಾರುಲ್ ವೆಂಕಟರಮಣ ದಾಸರಿ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಕೋರಿದರು.

2023 ರ ವಿಧಾನಸಭೆ‌ ಚುನಾವಣೆಯಲ್ಲಿ ನೂತನ ಪಕ್ಷ ಕಟ್ಟುವ ಮೂಲಕ ಸಂಚನ ಮೂಡಿಸಿರುವ ಗಾಲಿ ಜನಾರ್ಧನ ರೆಡ್ಡಿಯವರ ಸ್ಪರ್ಧಿಸುತ್ತಿರುವ ಕ್ಷೇತ್ರ ಗಂಗಾವತಿ ಪಕ್ಕದ ಕ್ಷೇತ್ರವಾದ ಕನಕಗಿರಿಯಲ್ಲಿ ಅಭ್ಯರ್ಥಿಯಾದ ವೈದ್ಯರಾದ ಡಾ.ಚಾರುಲ್ ವೆಂಕಟರಮಣ ದಾಸರಿ ರವರು ಭೇಟಿ ನೀಡಿ ಮುಸ್ಲಿಂ ಸಮುದಾಯದ ಸರ್ವ ಮುಖಂಡರಿಗೆ ಶುಭಾಶಯಗಳು ಕೋರುವ ಮೂಲಕ ಸಹೋದರತ್ವ ಹೆಜ್ಜೆಗೆ ನಾಂದಿ ಹಾಡಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ಹಾಗೂ ಧರ್ಮ ಗುರುಗಳಾದ ಶ್ರೀ ಬಾಬು ಸಾಬ್, ಅಜೀಂ ಯಾರ್ಡನ್, ಅಮನ್ ಬಿಸ್ಮಿಲ್ಲಾ, ರಜಬ್, ಬಾಬು ಸಾಬ್, ಮೆಹಬೂಬ್ ಬಳಿಗಾರ್, ಖಾಜಾ ಹುಸೇನ್, ಇನಾಯತ್ ಇನ್ನೂ ಮುಂತಾದ ಪಕ್ಷದ ಮುಖಂಡರು ಉಪಸ್ಥಿಯಿದ್ದರು.

ವರದಿ : ಹನುಮೇಶ್ ಬಟಾರಿ,ಕಾರಟಗಿ

Leave a Reply

error: Content is protected !!