href=”https://prajavikshane.com/wp-content/uploads/2023/04/IMG_20230423_094704-scaled.jpg”>
ಕುಕನೂರು: ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ಜಗದ್ಗುರು ಬಸವೇಶ್ವರರ 890ನೇ ಜಯಂತಿಯನ್ನು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದ ಜಂಗಮ ಸಮಾಜದ ತಾಲೂಕ ಅಧ್ಯಕ್ಷ ಮಹೇಶ್ ಕಲ್ಮಠ ಮಾತನಾಡಿ
ಬಸವಣ್ಣನ ವಚನಗಳಂತೆ ದೇಶದ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. 12ನೇ ಶತಮಾನದಲ್ಲಿ ಸಮಾನತೆ ತತ್ವ ಸಾರಿದ ವಚನ ಸಂದೇಶಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರು ಕಂಡ ಕನಸಿನ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗದಿಗೆಪ್ಪ ಪವಾಡ ಶೆಟ್ಟಿ, ಹರೀಶ್ವರಯ್ಯ ಹಿರೇಮಠ, ಜಯಕುಮಾರ್ ಆಂಟಿ, ನೀಲಕಂಠಯ್ಯ, ಪ್ರಭು ಶಿವಸಿಂಪರ, ವೀರಯ್ಯ ಹಿರೇಮಠ ಅಡೂರು, ವಿರುಪಾಕ್ಷಪ್ಪ ಬೆಳಗೇರಿ, ಸುನಿಲ್ ಕುಮಾರ್ ಮಠದ, ಕುಮಾರಸ್ವಾಮಿ ತೋಂಟದಾರ್ಯಮಠ, ಪ್ರವೀಣ್ ಕುಮಾರ್ ಹೊಸಮಠ,ಹಾಗೂ ಇತರರಿದ್ದರು.
ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು.
