ಕವಳಕೇರಿ ಯುವಕರ ಕಾರ್ಯ ಶ್ಲಾಘನೀಯ : ಈರಪ್ಪ ಕುಡಗುಂಟಿ

You are currently viewing ಕವಳಕೇರಿ ಯುವಕರ ಕಾರ್ಯ ಶ್ಲಾಘನೀಯ : ಈರಪ್ಪ ಕುಡಗುಂಟಿ

ಕುಕನೂರು : ಸಾಮೂಹಿಕ ವಿವಾಹಗಳಂತ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕವಳಕೇರಿ ಗ್ರಾಮದ ಯುವಕರು ಮಾಡುತ್ತೀರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಉದ್ಯಮಿ ಈರಪ್ಪ ಕುಡಗುಂಟಿ ಹೇಳಿದರು.
ತಾಲೂಕಿನ ಕವಳಕೇರಿ ಗ್ರಾಮದಲ್ಲಿ ರವಿವಾರ ಜೈ ಭೀಮ್ ಕಾಂತ್ರಿ ಯುವ ಸೇನೆ ಸಮಿತಿಯಿಂದ ಆಯೋಜಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಇಂದಿನ ಯುವಕರು ನಾನಾ ಚಟಗಳಿಗೆ ದಾಸರಾಗಿ ಕೆಲವು ಸಹ ಮನೆಯವರ ಮಾತನ್ನೇ ಕೇಳುವುದಿಲ್ಲ. ಇಂತಹ ದಿನಮಾನಗಳಲ್ಲಿ ಗ್ರಾಮದ ಯುವಕರೆಲ್ಲಾ ಸೇರಿಕೊಂಡು ಅಚ್ಚುಕಟ್ಟಾಗಿ ಸಾಮೂಹಿಕ ವಿವಾಹ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸುತ್ತಮುತ್ತಲಿನ ಯುವಕರಿಗೆ ಮಾದರಿಯಾಗಿದ್ದಾರೆ. ಇಂತಹ ಸಾಮಾಜಿಕ ಕಾರ್ಯ ಮಾಡುತ್ತಿರು ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಗಜೇಂದ್ರಗಡದ ಕಾಲಜ್ಞಾನ ಶ್ರೀಗಳು ನವವಧುವರಿಗೆ ಆರ್ಶಿವಚನ ನೀಡಿದರು. ಕಾರ್ಯಕ್ರಮದಲ್ಲಿ ಇಟಗಿಯ ಗದೆಗೆಪ್ಪಜ್ಜನವರು, ಮಕ್ಕಳ್ಳಿಯ ಶಿವಾನಂದ ಮಠದ ಶ್ರೀಗಳು, ಹಾಗೂ ಚವಡಿಯ ಪೂಜ್ಯರ ಸಾನಿಧ್ಯವನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಈಶಪ್ಪ ಶಿರೂರು, ಮರಿಯಪ್ಪ ಪೂಜಾರ್, ನಾಗರಾಜ್ ತಲ್ಲೂರು, ಗಗನ್ ನೋಟಗಾರ, ಡಿಂಗ್ರಿ ನರೇಶ, ವಸಂತ ಬಾವಿಮನಿ, ಮರಿಗೌಡ ಪಾಟೀಲ್, ರಾಜೂ ಶೆಟ್ಟರ, ನಾಗನಗೌಡ ಕಲ್ಲೂರು ಹಾಗೂ ಇತರರಿದ್ದರು.

Leave a Reply

error: Content is protected !!