ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನೂ ಕೆಲವೇ ದಿನಗಳು ಬಾಕಿದ್ದು, ಇದೀಗ ಖಾಸಗಿ ಸಂಸ್ಥೆವೊಂದರ ಸಿ-ವೋಟರ್ ಸಮೀಕ್ಷೆಯು (C-Voter Survey) ಚುನಾವಣೆಗೆ ಸಂಬಂಧಿಸಿದಂತೆ ಫಲಿತಾಂಶ ಬಂದಿದೆ. ಈ ಫಲಿತಾಂಶದ ಪ್ರಕಾರ ಒಂದು ರಾಜಕೀಯ ಪಕ್ಷಕ್ಕೆ ಭರ್ಜರಿ ಮುನ್ನಡೆ ಯಾಗಲಿದೆ ಎಂದು ಸರ್ವೆ ಹೇಳಿದೆ. ಈ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಈ ಬಾರಿ ಮಧ್ಯ ಕರ್ನಾಟಕ ಭಾಗದಲ್ಲಿ ಸಾಧಿಸಲಿದೆ ಎಂದು ವರದಿಯಲ್ಲಿ ತಿಳಿಸಿದೆ.
ಮಧ್ಯ ಕರ್ನಾಟಕ ಭಾಗದ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿಯು 13-17 ಸ್ಥಾನ ಸಾಧ್ಯತೆ ಇದೆ. ಅದೇ ರೀತಿ ಕಾಂಗ್ರೆಸ್ 18 ರಿಂದ 22 ಸೀಟು ಗೆಲ್ಲುವ ಬಹುತೇಕ ಸಾಧ್ಯತೆ ಇದೆ ಎಂದು ಸಿ ವೋಟರ್ಸ್ ಸಮೀಕ್ಷಾ ಹೇಳಿದೆ. ಇತ್ತ ಜೆಡಿಎಸ್ 1 ಸ್ಥಾನ, ಇತರೆ 01 ಸ್ಥಾನವನ್ನು ಗೆಲ್ಲಬಹುದು ಎಂದು ಮಾಹಿತಿ ಇದೆ.
ಈ ಸಿ-ವೋಟರ್ ಸಮೀಕ್ಷೆಯಲ್ಲಿ ಜನರ ಮುಂದೆ 12 ಪ್ರಶ್ನೆಗಳನ್ನು ಇಡಲಾಗಿತ್ತು ಎಂದು ತಿಳಿದು ಬಂದಿದೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಸಹಕಾರಿ ಆಗಿದ್ಯಾ ಎನ್ನುವ ಪ್ರಶ್ನೆಗೆ ಶೇಕಡಾವಾರು 40.6ರಷ್ಟು ಜನರು ಇಲ್ಲ ಎಂದು ಉತ್ತರಿಸಿದ್ದರೇ, ಶೇಕಡಾವಾರು 38.7ರಷ್ಟು ಹೌದು ಅಗತ್ಯವಿದೆ ಎಂದಿದ್ದಾರೆ. ಅದರ ಜೊತೆಗೆ ಶೇಕಡಾವಾರು 20.7ರಷ್ಟು ಜನರು ಹೇಳೋದಕ್ಕೆ ಆಗಿಲ್ಲ ಎಂದು ಉತ್ತರಿಸಿದ್ದಾರೆ.