ಕುಕನೂರು: ತಾಲೂಕಿನ ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡವಿಹಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಾರಂಭವಾದ, ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ, ರೋಜಗಾರ ದಿನಾಚರಣೆ, ಆರೋಗ್ಯ ಅಮೃತ ಅಭಿಯಾನ ಜನನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ ಮತದಾನ ಒಂದು ಪವಿತ್ರವಾದ ಮತ್ತು ಹಕ್ಕು ಆಧರಿತ ವರ, ಅದನ್ನು ಒಳ್ಳೆಯ ನಾಯಕರನ್ನು ಆಯ್ಕೆಮಾಡಲು ಬಳಸಬೇಕು. ಯಾವುದೇ ಜಾತಿ,ಧರ್ಮ,ಆಸೆ, ಆಮಿಷಗಳಿಗೆ ಓಳಗಾಗದೇ ಕಡ್ಡಾಯವಾಗಿ ಮತ ಹಾಕಬೇಕು, ಅದಕ್ಕಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದು ಮತಗಟ್ಟೆಯನ್ನು ಮಾದರಿ ಮತಗಟ್ಟೆಯಾಗಿ ಗುರುತಿಸಿ ಮತದಾರರಿಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳಾದ ಜಾಥಾ, ಮತದಾರರ ಸಹಿ ಸಂಗ್ರಹಣೆ ಅಭಿಯಾನ, ಮನೆ-ಮನೆ ಭೇಟಿ, ಸ್ವ ಸಹಾಯ ಸಂಘದಿAದ ಮೇಣದ ಬತ್ತಿ ಹಚ್ಚುವುದು ಸೇರಿಂತೆ ಹಲವಾರು ಕಾರ್ಯಕ್ರಮ ಮಾಡಲಾಗುತ್ತಿದೆ.
ಅಲ್ಲದೇ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಾರಂಭವಾದ ಎಲ್ಲ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ನೊಂದಾಯೊತ ಕೂಲಿಕಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ಮತ ಹಾಕುವಂತೆ ಪ್ರೇರೇಪಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯ ತಾಂತ್ರಿಕ ಸಹಾಯಕ, ಶರಣಯ್ಯ ಹಿರೇಮಠ, ಕಂಪ್ಯೂಟರ್ ಅಪರೇಟರ್ ಪ್ರದೀಪ್, ಕೆ.ಎಚ್.ಪಿ.ಟಿ ಸಂಯೋಜಕ ರಫೀಕ್ ಸಾಬ್, ಕಾಯಕ ಬಂಧುಗಳು, ಕೂಲಿಕಾರರು ಹಾಗೂ ಇತರರಿದ್ದರು.
ನರೇಗಾ ಕೆರೆ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ
