ಕುಕನೂರು : ತಾಲೂಕಿನ ವಟಪರವಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಚುನಾವಣೆಯ ಪ್ರಚಾರ ನಿಮಿತ್ಯ ಯಲಬುರ್ಗಾ ಭಾಜಪ ಮಂಡಲದಿಂದ ಹಮ್ಮಿಕೊಂಡಿದ್ದ ಸಭೆಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ನ್ನು ಆರತಿ ಮಾಡುವ ಮೂಲಕ, ದಾರಿಯುದ್ದಕ್ಕೂ ಹೂ ಚೆಲ್ಲಿ ಸ್ವಾಗತ ಕೋರಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಟಪರವಿ ಗ್ರಾಮದ ಜನರ ಈ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮ ಈ ಸಂಭ್ರಮ ನೋಡಿ ನನಗೆ ಗೆದ್ದಷ್ಟೇ ಖುಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರೊಬ್ಬರು ಮಾತನಾಡಿ ಹಾಲಪ್ಪ ಆಚಾರ ರು ಸಚಿವರಿದ್ದಾಗ ನಮ್ಮ ಗ್ರಾಮಕ್ಕೆ ಸುಮಾರು 2ಕೋಟಿಯಷ್ಟು ಹಣ ನೀಡಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ನಮ್ಮ ಗ್ರಾಮದಿಂದ ಅವರಿಗೆ ಅಭಿನಂದನೆ ತಿಳಿಸುತ್ತೇವೆ. ಹಾಗೂ ನಮ್ಮ ಗ್ರಾಮದಿಂದ ಹೆಚ್ಚಿನ ಅಂತರದಲ್ಲಿ ಅವರಿಗೆ ಮತ ನೀಡಿ ಗೆಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅರವಿಂದ್ ಗೌಡ ಪಾಟೀಲ್, ಶಿವಶಂಕರ್ ದೇಸಾಯಿ, ಸುಧಾಕರ್ ದೇಸಾಯಿ ಕಳಕಪ್ಪಕಂಬಳಿ, ಹನುಮಪ್ಪ ಹನುಮಪುರ, ರತನ್ ದೇಸಾಯಿ,
ಹಾಗೂ ಇತರರು ಇದ್ದರು.