ಯಲಬುರ್ಗಾ : ಮಲ್ಲಿಕಾರ್ಜುನ ಖರ್ಗೆ ಮಾತಿಗೆ ತಿರುಗೇಟು ಕೊಟ್ಟ ಬಸನಗೌಡ ಪಾಟೀಲ ಯತ್ನಾಳ
ಪ್ರಧಾನಿ ಮೋದಿ ನಾಗರ ಹಾವಾದರೆ, ಸೋನಿಯಾ ಗಾಂಧಿ ವಿಷದದ ಕನ್ಯಯೇ ಎಂದು ವಾಗ್ದಾಳಿ ನೆಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ಪಟ್ಟಣದಲ್ಲಿ ಗುರುವಾರ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿಗಳ ಬಗ್ಗೆ ಹೀಗೆ ಮಾತನಾಡಿ ಗುಲಬುರ್ಗಾ ಲೋಕಸಭಾದಲ್ಲಿ ಹಿಂದೆ ಖರ್ಗೆಯವರು ಸೋತಿದ್ದರು. ಈಗ ಮತ್ತೆ ಮೋದಿ ಕುರಿತು ನಾಗರ ನಾವು ಎಂದಿದ್ದಾರೆ. ಇವರು ಹಿರಿಯರು ಇವರ ಬಗ್ಗೆ ನಮಗೆ ಗೌರವವಿದೆ, ಒಬ್ಬ ದೇಶದ ಪ್ರಧಾನಿಯನ್ನು ಒಬ್ಬ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ನಮ್ಮ ದೇಶದ ಪ್ರಧಾನಿಯನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಅಮೇರಿಕಾ ಒಂದು ಕಾಲದಲ್ಲಿ ವೀಸಾ ಕೊಟ್ಟಿರಲಿಲ್ಲ, ಇಂದು ಅದೇ ಅಮೇರಿಕಾ ಕೆಂಪು ಹಾಸಿಗೆಯನ್ನು ಹಾಸಿ ಸ್ವಾಗತ ಮಾಡಿಕೊಂಡು ಹೋಗುವಂತಹ ಮಹಾನಾಯಕರಾಗಿದ್ದಾರೆ. ಇಂತಹ ನಾಯಕರನ್ನು ನಾಗರ ಹಾವಿಗೆ ಹೋಲಿಸುತ್ತಾರೆ, ವಿಷ ಕಚ್ಚತಾರೆ ಅಂತ ಹೇಳುತ್ತಿರಿ, ನಿಮ್ಮ ನಾಯಕ ಸೋನಿಯಾ ಗಾಂಧೀ ವಿಷಕನ್ಯೆಯೇ ಎಂದು ತಿರುಗೇಟು ನೀಡಿ. ಸೋನಿಯಾ ಗಾಂಧೀ ಪಾಕಿಸ್ತಾನ ಹಾಗೂ ಚೀನಾದ ಏಜೆಂಟ್‌ಗಾಗಿ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿಯನ್ನು ನೆಡೆಸಿದ್ದಾರೆ.
ಪ್ರಧಾನಿ ಮೋದಿ ನಾಗರ ಹಾವಾದರೆ, ಸೋನಿಯಾ ವಿಷ ಕನ್ಯಯೇ .? ಯತ್ನಾಳ
