ಬೆಂಗಳೂರು : ವಿಧಾನಸಭಾ ಚುನಾವಣೆಗೆ ಇನ್ನೆನು ಕೆಲವೇ ದಿನಗಳು ಬಾಕಿದ್ದು, ಚುನಾವಣಾ ಕಲಸ ಭರದ ಸಿದ್ಧತೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಪ್ರತಿಷ್ಠಿತ ಮಧ್ಯಮವೊಂದರ ಸಹಯೋಗದೊಂದಿಗೆ ಮೆಗಾ ಅಭಿಪ್ರಾಯ ಸಂಗ್ರಹ ಮಾಡಿದೆ. ಇದರಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಗರಿಷ್ಠ 52 ಶೇಕಡಾವಾರು ಜನರು ಬೊಮ್ಮಾಯಿ ಸರ್ಕಾರ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಸಮೀಕ್ಷೆಯಲ್ಲಿ ಕೇಲಿದ ಪ್ರಮುಖ ಪ್ರಶ್ನೆ ಹೀಗಿದೆ. ಮೊದಲ ಪ್ರಶ್ನೆ, ರಾಜ್ಯ ಸರ್ಕಾರದ ಕೆಲಸಗಳು ಹೇಗೆ ನಡೆದಿದೆ? ಎಂದು ಜನರನ್ನ ಪ್ರಶ್ನಿಸಿದಾಗ, ಶೇಕವಾರು.29 ರಷ್ಟು ಜನರು ಬೊಮ್ಮಾಯಿ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ಅಭಿಪ್ರಾಯ ಹೇಳಿದ್ದಾರೆ. ಇದೇ ಪ್ರಶ್ನೆಗೆ ಅದೇ ಸಮಯದಲ್ಲಿ, ಶೇಕಡಾವಾರು 19ರಷ್ಟು ಜನರು ಸರಾಸರಿ ಕೆಲಸ ಉತ್ತಮವಾಗಿದೆ ಎಂದು ಹೇಳಿದರು. ಇನ್ನುಳಿದಂತೆ ಶೇಕವಾರು 52ರಷ್ಟು ಜನಾಭಿಪ್ರಯ ಉತ್ತಮ ಕೆಲಸವಾಗಿಲ್ಲ ಎಂದು ಹೇಳಿದ್ದಾರೆ. ಈ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಭಾರೀ ಹಿನ್ನೆಡೆಯಾಗಿದೆ.