BREAKING : ಬಿಜೆಪಿಯ ಪ್ರಜಾ ಪ್ರಣಾಳಿಕೆ ಬಿಡುಗಡೆ : ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ..!!

You are currently viewing BREAKING : ಬಿಜೆಪಿಯ ಪ್ರಜಾ ಪ್ರಣಾಳಿಕೆ ಬಿಡುಗಡೆ : ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ..!!

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಬಿಜೆಪಿಯ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಜೆ.ಪಿ.ನಡ್ಡಾ ಅವರು ಬಿಜೆಪಿಯ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಬಿಜೆಪಿಯ ಪ್ರಜಾ ಪ್ರಣಾಳಿಕೆಯ ಪ್ರಮುಖ ಅಂಶಗಳು

1. ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ವಾರ್ಷಿಕ ಮೂರು (ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಪ್ರಯುಕ್ತವಾಗಿ) ಉಚಿತ ಸಿಲಿಂಡರ್‌ ಗ್ಯಾಸ್‌ ವಿತರಣೆ ಭರವಸೆ
2. ಪ್ರತಿ ವಾರ್ಡ್‌ಗಳಲ್ಲಿ ಅಟಲ್‌ ಆಹಾರ ಕೇಂದ್ರ ಸ್ಥಾಪನೆ
3. ಬಿಪಿಎಲ್‌ ಕುಟುಂಬದವವರಿಗೆ ಪ್ರತಿ ದಿನ ಅರ್ಧ ಲೀಟರ್‌ ನಂದಿನಿ ಉಚಿತ ಹಾಲು ಹಾಗೂ ಪ್ರತಿ ತಿಂಗಳು 5 ಕೆಜಿ 5 ಕೆಜಿ ಸಿರಿ ಅನ್ನ, ಸಿರಿ ಧಾನ್ಯ ವಿತರಣೆ
4. ಏಕರೂಪ ನಾಗರಿಕ ಸಹಿತೆ ಜಾರಿ
5. “ಸರ್ವರಿಗೂ ಸೂರು ಯೋಜನೆ”ಯಡಿಯಲ್ಲಿ 10 ಲಕ್ಷ ನಿವೇಶನ ಹಂಚಿಕೆ
6. ಒನಕೆ ಓಬವ್ವ ಸಾಮಾಜಿಕ ನ್ಯಾಯನಿಧಿ ಯೋಜನೆ ಜಾರಿ ಭರವಸೆ
7. ವಿಶ್ವೇಶ್ವರಯ್ಯ ವಿದ್ಯಾ ಯೋಜನೆ : ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೇಲ್ದರ್ಜೆಗೆ ಕೊಂಡ್ಯೂವುದು
8. ಸಮನ್ವಯ ಯೋಜನೆ : ಎಸ್‌ಎಂಇ ಮತ್ತು ಐಟಿಐ ನಡುವೆ ಸಮನ್ವಯ ಸಾಧಿಸುವುದು
9. ಐಎಎಸ್‌ / ಕೆಎಎಸ್‌ / ಬ್ಯಾಂಕಿಂಗ್‌ / ಸರ್ಕಾರಿ ಉದ್ಯೋಗಕ್ಕಾಗಿ ತರಬೇತಿ ಪಡೆಯುವ ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಧನಸಹಾಯ ಭರವಸೆ
10. ಮಿಷನ್‌ ಸ್ವಾಸ್ತ್ಯ ಕರ್ನಾಟಕದ ಅಡಿಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗ ಒತ್ತು
11. ಹಿರಿಯ ನಾಗರೀಕರಿಗೆ ವಾರ್ಷಿಕ ಉಚಿತ ಮಾಸ್ಟರ್‌ ಹೆಲ್ತ್‌ ಚೆಕಪ್‌ ಯೋಜನೆ
12. ಮುಂದಿನ ತಲೆಮಾರಿಗೆ ಬೆಂಗಳೂರಿನ ಅಭಿವೃದ್ಧಿಗೆಆಲೋಚನೆ
13. ವಿದ್ಯುನ್ಮಾನ ವಾಹನಗಳ ಹಬ್‌ ಆಗಿ ಕರ್ನಾಟಕವನ್ನು ಪರಿವರ್ತನೆ ಮಾಡುವುದು
14. 30 ಸಾವಿರ ಕೋಟಿ ರೂ. ಕೆ ಅಗ್ರಿ ಫಂಡ್‌ ಸ್ಥಾಪನೆಗೆ ಒತ್ತು
15. ಕಲ್ಯಾಣ ಸರ್ಕ್ಯೂಟ್‌, ಬನವಾಸಿ ಸರ್ಕ್ಯೂಟ್‌, ಪರಶುರಾಮ ಸರ್ಕ್ಯೂಟ್‌, ಕಾವೇರಿ ಸರ್ಕ್ಯೂಟ್‌, ಗಂಗಾಪುರ ಕಾರಿಡಾರ್‌ ನಿರ್ಮಾಣಕ್ಕೆ 1500 ಕೋಟಿ ರೂ. ನೀಡಿ ಸ್ಥಾಪನೆ
16. ರಾಜಧಾನಿ ಬೆಂಗಳೂರು ಹೊರತು ಪಡಿಸಿ 10 ಲಕ್ಷ ಉದ್ಯೋಗಗಳ ಸೃಷ್ಟಿಸುವುದು
17. ಅಪಾರ್ಟ್‌ಮೆಂಟ್‌ ಓನರ್‌ಶಿಫ್ಟ್‌ ಆಕ್ಟ್‌ ತಿದ್ದುಪಡಿಯ ಭರವಸೆ
18. ರಾಜ್ಯವನ್ನು “ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರ”ವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾಜಿರ್ಂಗ್ ಸ್ಟೇಷನ್‍ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‍ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್‍ಗಳಾಗಿ ಪರಿವರ್ತಿಸಿ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ಇಬಿ ಸಿಟಿ ಅಭಿವೃದ್ಧಿಗೆ ಒತ್ತು.
19. ಮುಂಬರುವ 5 ವರ್ಷಗಳಲ್ಲಿ 200 ಮೀನು ಕೃಷಿ ಉತ್ಪಾದನಾ ಕೇಂದ್ರ ಸೇರಿದಂತೆ ಒಂದು ಸಾವಿರ ಕೃಷಿ ಉತ್ಪಾದನೆ ಕೇಂದ್ರಗಳ ಸ್ಥಾಪನೆಗೆ ಕ್ರಮ
20. ಭಗೀರಥ ಶಪಥ ಯೋಜನೆಯಡಿಯಲ್ಲಿ ಸಮಗ್ರ ನೀರಾವರಿ ವ್ಯವಸ್ಥೆ ಮಾಡುವುದು.
21. ಪ್ರತಿ ಲೀಟರ್​ ಹಾಲಿಗೆ 5 ರಿಂದ 7 ರೂಪಾಯಿ. ಪ್ರೋತ್ಸಾಹಧನ ನೀಡಿವುದು
22. ಪ್ರತಿ ತಾಲೂಕಿನಲ್ಲಿ “ಮೊಬೈಲ್​ ಪಶು ಆರೋಗ್ಯ ಕ್ಲಿನಿಕ್” ಸ್ಥಾಪನೆ
23. ಉತ್ಪನ್ನ ಸಾಗಿಸುವ “ರೈತರಿಗೆ ಉಚಿತ ಬಸ್​ ಟಿಕೆಟ್” ಸೌಲಭ್ಯ ಕಲ್ಪಿಸುವುದು
24. ಸೋಲಾರ್ ಪಂಪ್​​ಸೆಟ್​ಗಳನ್ನು ಬಳಸುವ ರೈತರಿಗೆ ಶೇಕಡವಾರು 80 ಪ್ರತಿಶತ ಸಬ್ಸಿಡಿ ನೀಡಲಾಗುತ್ತದೆ.
25. 500 ಕೋಟಿ ರೂಪಾಯಿ. ಮೊತ್ತದ “ಸಾವಯವ ಕೃಷಿ ಮಿಷನ್’” ಜಾರಿ ಮಾಡುವುದು.
26. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಕ್ರಮ
27. 1000 ಕೋಟಿ ರೂಪಾಯಿ ಮೊತ್ತದ ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ
28. “ನೇಕಾರ ಸಮ್ಮಾನ ಯೋಜನೆ”ಯಡಿಯಲ್ಲಿ 1.5 ಲಕ್ಷ ನೇಕಾರರಿಗೆ ಆರ್ಥಿಕ ನೆರವು
29. ನೇಕಾರರಿಗೆ ನೀಡುವ ಧನಸಹಾಯ 2 ಸಾವಿರ ರೂ. ದಿಂದ 5 ಸಾವಿರ ರೂ.ಗಳಿಗೆ ಹೆಚ್ಚಳ
30. ಉದ್ಯೋಗಸ್ಥ ಮಹಿಳೆಯರು, ವಿದ್ಯಾರ್ಥಿನಿಯರಿಗೆ “ಉಚಿತ ಬಸ್ ಪಾಸ್” ಭರವಸೆ​
31. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತಿದೊಡ್ಡ “ಪುನೀತ್ ರಾಜ್​ಕುಮಾರ್​ ಫಿಲ್ಮ್​ಸಿಟಿ” ಸ್ಥಾಪನೆ ಭರವಸೆ
32. ವಿಧವೆಯರ ಮಾಸಿಕ ಪಿಂಚಣಿ 800 ರೂ.ರಿಂದ 2 ಸಾವಿರಕ್ಕೆ ಹೆಚ್ಚಳದ ಭರವಸೆ
33. ಎಲ್ಲಾ ತಾಲೂಕು ಕೇಂದ್ರಗಳಲ್ಲಿ “ಸ್ವದೇಶಿ ಕ್ರೀಡೆ” ಕಬಡ್ಡಿ ತರಬೇತಿ ಕೇಂದ್ರಕ್ಕೆ ಒತ್ತು ನೀಡಿ ಸ್ಥಾಪನೆ
35. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯ ಹಾಗೂ ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 30,000 ಕೋಟಿ ರೂಪಾಯಿ ಮೊತ್ತದ ಕೆ-ಅಗ್ರಿ ಫಂಡ್ ಸ್ಥಾಪನೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡುವುದು.
36. ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡಿ, 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‌ಗಳನ್ನು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್‍ಗಳನ್ನು ಸ್ಥಾಪನೆ ಭರವಸೆ.

Leave a Reply

error: Content is protected !!