ಕುಕನೂರು:ಯಲಬುರ್ಗಾದಲ್ಲಿ ರಾಯರಡ್ಡಿ, ಅಥಣಿಯಲ್ಲಿ ನಾನು ಗೆಲ್ಲೋವರೆಗೂ ಹಾರ ಸನ್ಮಾನ ಸ್ವೀಕರಿಸಲ್ಲ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ ಸವದಿ ಹೇಳಿದರು.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ ರಾಯರಡ್ಡಿ ಪರ ಸೋಮವಾರ ಬೇವೂರು ಗ್ರಾಮದಲ್ಲಿ ನೆಡೆದ ಪ್ರಚಾರ ಕಾರ್ಯಕ್ರಮವನ್ನು ಭಾಗವಹಿಸಿ ಮಾತನಾಡಿದ ಅವರು ನಾನು ೨೦೦೪ರಲ್ಲಿ ಬಿಜೆಪಿಯನ್ನು ಸೇರಿದಾಗ ಅಥಣಿಯಲ್ಲಿ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ಸಹಿತ ಇರಲಿಲ್ಲ. ಇಂದು ಕ್ಷೇತ್ರದಲ್ಲಿ ಸಂಪೂರ್ಣ ಬಿಜೆಪಿಯಿಂದ ಕೂಡಿದೆ. ಈ ರೀತಿ ಪಕ್ಷ ಕಟ್ಟಿದ ನಮಗೆ ಬಿಜೆಪಿಯಲ್ಲಿ ಬೆಲೆ ಕೊಡಲಿಲ್ಲ, ಅಲ್ಲಿ ಕೇವಲ ಭ್ರಷ್ಟ, ಹಾಗೂ ಜಾತೀವಾದಿಗಳಿಗೆ ಮಾತ್ರ ಬೆಲೆ ಇದೆ. ಸುಮಾರು ೩೦ ವರ್ಷ ಪಕ್ಷಕ್ಕಾಗಿ ದುಡಿದವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ನಾನು ಯಲಬುರ್ಗಾ ಹಾಗೂ ಕೊಪ್ಪಳ ಕ್ಷೇತ್ರಕ್ಕೆ ಬರದಂತೆ ತಡೆಯಲು ತಮ್ಮ ಆಪ್ತರನ್ನು ಮನಗೆ ಕಳಿಸಿ ಯಲಬುರ್ಗಾ ಬರದಂತೆ ಮನ ಓಲಿಸಲು ಪ್ರಯತ್ನಿಸಿದ್ದಾರೆ. ಹಾಲಪ್ಪ ಆಚಾರ್ ಕ್ಷೇತ್ರದ ಅಭಿವೃದ್ದಿಯನ್ನು ಮರೆತು ತಮ್ಮ ಕುಟುಂಬವನ್ನು ಬೆಳೆಸಲು ಮುಂದಾಗಿದ್ದಾರೆ. ಹಾಲಪ್ಪ ಆಚಾರ್‌ರ ಪಾಳೆ ಮುಗಿದೆ ಅವರ, ಹೀಗಾಗಿ ಅಭಿವೃದ್ದಿ ಹರಿಕಾರ ಹಾಗೂ ಕ್ಷೇತ್ರದಲ್ಲಿ ಶಿಕ್ಷಣ ಕಾಂತ್ರಿ ಮಾಡಿರುವ ಬಸವರಾಜ ರಾಯರಡ್ಡಿ ಅವರನ್ನು ಬೆಂಬಲಿ ಗೆಲ್ಲಿಸಬೇಕು. ಯಲಬುರ್ಗಾದಲ್ಲಿ ರಾಯರಡ್ಡಿ ಹಾಗೂ ಅಥಣಿಯಲ್ಲಿ ನಾನು ಗೆದ್ದರೆ ಮಾತ್ರ ಹೂವಿನ ಮಾಲೆ ಹಾಗೂ ಸನ್ಮಾನವನ್ನು ಸ್ವೀಕರಿಸುತ್ತೇನೆ. ಅಲ್ಲಿಯ ವರೆಗೆ ಯಾವುದೇ ಸನ್ಮಾನ ಸ್ವೀಕರಿಸುತ್ತೇನೆ. ರಾಯರಡ್ಡಿ ಗೆದ್ದರೆ ನಾನೇ ಬೇವೂರು ಗ್ರಾಮದಲ್ಲಿ ವೇದಿಕೆ ನಿರ್ಮಿಸಿ ಸನ್ಮಾನವನ್ನು ಮಾಡಿ ಸ್ವೀಕರಿಸಿಸುತ್ತೇನೆ. ನಾನು ಬಂದು ಹೋಗಿದ್ದಕ್ಕೆ ಗೌರವನ್ನು ಉಳಿಸಬೇಕೆಂದರೆ ನೀವು ರಾಯರಡ್ಡಿಯನ್ನು ಗೆಲ್ಲಿಸಲೆಬೇಕು ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿಯಾದ ರಾಘವೇಂದ್ರ ಹಿಟ್ನಾಳ ಮಾತನಾಡಿ ಹಿರಿಯರು ಹಾಗೂ ಮಾರ್ಗದರ್ಶಕರಾದ ರಾಯರಡ್ಡಿಗೆ ಮತ ನೀಡಿ ಬಹುಮತದಿಂದ ಆರಿಸಿತರಬೇಕೆಂದು ಹೇಳಿದರು.
ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಹನಮಂತಗೌಡ ಚೆಂಡೂರು, ಯಂಕಣ್ಣ ಯರಾಶಿ, ವೀರನಗೌಡ ಪೋಲಿಸ್ ಪಾಟೀಲ, ಚಂದ್ರಶೇಖರಯ್ಯ ಹಿರೇಮಠ, ಶಿವನಗೌಡ ದಾನರಡ್ಡಿ, ಮಂಜುನಾಥ ಕಡೇಮನಿ, ಅಶೋಕ ತೋಟದ, ಸಂಗಮೇಶ ಗುತ್ತಿ, ಸುಧೀರ ಕೊರ್ಲಳ್ಳಿ, ಆದೇಶ ರೊಟ್ಟಿ ಹಾಗೂ ಇತರರಿದ್ದರು.