ಕುಕನೂರು : ಬಿಜೆಪಿಯ ಸ್ಟಾರ್ ಪ್ರಚಾರಿಕರಲ್ಲಿ ಒಬ್ಬರಾದ ಚಿತ್ರನಟ ಕಿಚ್ಚ ಸುದೀಪ್ ನಾಳೆ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಬಿಜೆಪಿ ತಾಲೂಕ ಕಚೇರಿ ಮೂಲಗಳಿಂದ ತಿಳಿದು ಬಂದಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಪರವಾಗಿ ಯಲಬುರ್ಗಾ ಪಟ್ಟಣಕ್ಕೆ ಬುಧವಾರ ಸಂಜೆ 5:00 ಗಂಟೆಗೆ ಆಗಮಿಸಿ ಹಾಲಪ್ಪ ಆಚಾರ್ ಪರ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಬೇವೂರಿನಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಅದು ಇನ್ನು ಖಚಿತ ವಾಗಿಲ್ಲ.