ಹಾಲಪ್ಪ ಆಚಾರ್ ಪರ ಭರ್ಜರಿ ಮತಯಾಚನೆ ಮಾಡಿದ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ


ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಪರ ಬಿಜೆಪಿಯ ರಾಷ್ಟಿçÃಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಬಹಿರಂಗ ಸಭೆಯ ಮೂಲಕ ಭರ್ಜರಿ ಮತಯಾಚನೆ ಮಾಡಿದರು.
ಪಟ್ಟಣದ ಶರಣಪ್ಪ ಅರಕೇರಿ ಅವರ ಬಯಲು ಜಾಗೆಯಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಶುಕ್ರವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಪರ ಪ್ರಚಾರ ಕಾರ್ಯಕ್ರಮದ ಪ್ರಯುಕ್ತ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಆಂಜನೇಯನ ಜನ್ಮ ಸ್ಥಳವಾದ ಹಾಗೂ ಇಟಗಿಯ ಮಹಾದೇವ ದೇವಾಲಯ ಇವರು ಇಂತಹ ನಾಡಿನಲ್ಲಿ ಮಾತನಾಡುತ್ತಿರುವ ನಾನು ಭಾಗ್ಯವಂತ ಎಂದು ಹೇಳುವ ಮೂಲಕ ಭಾಷಣ ಪ್ರಾರಂಭ ಮಾಡಿದ ಹಾಲಪ್ಪ ಆಚಾರ ಸರಳ ಸಜ್ಜನಿಕೆಯ ರಾಜಕಾರಣಿ ಅವರು ಸದಾ ಕಲಾ ಕ್ಷೇತ್ರದ ಜನತೆಗೆ ಸಿಗುವಂತಹ ವ್ಯಕ್ತಿಯಾಗಿದ್ದಾರೆ. ಇಂತಹ ವ್ಯಕ್ತಿಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಮೊತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವುದರಿಂದ ಡಬಲ್ ಇಂಜಿನ್ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದರು.
ಪ್ರಾಸ್ತಾವಿಕವಾಗಿ ಹಾಲಪ್ಪ ಆಚಾರ್ ಮತನಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಗೋವಿಂದ ಕಾರಜೋಳ ಮಾತನಾಡಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ಸರ್ಕಾರದ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರುತ್ತಿದೆ. ಇದರಿಂದ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಣಾಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕರ, ಅಜಯಕುಮಾರ ಮಾಮರ, ಚಂದ್ರು ಹಲಗೇರಿ, ಜಗದೀಶ ಹಿರೇಮನಿ, ಬಸಲಿಂಗಪ್ಪ ಭೂತೆ, ರತನ್ ದೇಸಾಯಿ, ಪವನ ಕುಮಾರ್, ಈರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಶಂಭು ಜೋಳದ, ಸಿ.ಎಚ್. ಪೋಲಿಸ್ ಪಾಟೀಲ ಹಾಗೂ ಇತರಿದ್ದರು.

Leave a Reply

error: Content is protected !!