ಅದ್ದೂರಿಯಾಗಿ ಸಂಪನ್ನಗೊಂಡ ದುರ್ಗಾದೇವಿಯ ಜಾತ್ರಾಮಹೋತ್ಸವ


ಕುಕನೂರು : ಶ್ರೀ ದುರ್ಗಾದೇವಿಯ ದೇವಸ್ಥಾನದ ಕಳಸಾರೋಣಹ ಹಾಗೂ ದೇವಿಯ ಪಲ್ಲಕ್ಕಿ ಉತ್ಸವದೊಂದಿಗೆ ಜಾತ್ರಾಮಹೋತ್ಸವವು ಅದ್ದೂರಿಯಾಗಿ ಜರುಗಿತು.

ತಾಲೂಕಿನ ಚಿಕೆನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾದೇವಿಯ ದೇವಸ್ಥಾನದ ಕಳಸಾರೋಣಹ ಕಾರ್ಯಕ್ರಮ ನೆಡೆಯಿತು. ಬೆಳ್ಳಿಗ್ಗೆ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆಡೆದವು. ನಂತರ ದೇವಸ್ಥಾನಕ್ಕೆ ಪುರೋಹಿತರ ಸಾನಿಧ್ಯದಲ್ಲಿ ಕಳಸಾರೋಹಣವನ್ನು ನೆರೆವೇರಿಸಲಾಯಿತು.

ನಂತರ ಸಕಲ ವಾದ್ಯ ವೈಭೋಗದೊಂದಿಗೆ ದೇವಿಯ ಪಲ್ಲಕ್ಕಿ ಉತ್ಸವವು ಗಂಗೆ ನೀರು ತರುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ನಂತರದಲ್ಲಿ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ನೂರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಮಹಿಳೆಯರು ಮಕ್ಕಳು ಸೇರಿಕೊಂಡು ದೇವಿಯ ಜಾತ್ರಾಮಹೋತ್ಸವನ್ನು ಅದ್ದೂರಿಯಾಗಿ ಆಚರಿಸಿದರು.

Leave a Reply

error: Content is protected !!