ಕುಕನೂರು :ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳಿಂದ ಹಣದ ಹೊಳೆ ಹರಿಯುತ್ತಿದ್ದು ಅದನ್ನು ತಡೆಗಟ್ಟಿ ಪಾರದರ್ಶಕ ಚುನಾವಣೆಯನ್ನು ನೆಡೆಸುವಂತೆ ದೂರು ಸಲ್ಲಿಸಿರುವುದಾಗಿ ಪಕ್ಷೇತರ ಅಭ್ಯರ್ಥಿಯಾದ ಶಂಕರಡ್ಡಿ ಸೋಮರಡ್ಡಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಗಳಿಂದ ಹಣ ನೀಡುವ ಮೂಲಕ ಹಾಗೂ ಗ್ರಾಮದ ದೇವಸ್ಥಾನಗಳಿಗೆ ಮತ್ತು ಯವಕರ ಸಂಘ, ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಮತದಾರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಅಲ್ಲದೇ ನಾಮಿನೇಷನ್ ಸಲ್ಲಿಸುವ ವೇಳೆಯಲ್ಲಿ ಹಣ ಕೊಟ್ಟು ಕಾರ್ಯಕರ್ತರನ್ನು ತಂದಿದ್ದು ಕುರಿತು ಸಾಕ್ಷಿ ಸಮೇತ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿರುವದಾಗಿ ತಿಳಿಸಿದ್ದಾರೆ.
ಅಲ್ಲದೇ ವಕೀಲರ ಮೂಲಕ ಹೈಕೊರ್ಟನಲ್ಲಿ ರೀಟ್ ಅರ್ಜಿಯನ್ನು ಸಲ್ಲಿಸಿದ್ದೇನೆ. ದಿನಾಂಕ ೦5/೦5/2023 ರಂದು ರೀಟ್ ಅರ್ಜಿ ಸಂಖ್ಯೆ : WP1೦2689/2023 ಮೂಲಕ ಕೇಸ್ ನಂಬರ್ WP103015/2023 ಮೂಲಕ ಕೇಸ್ ದಾಖಲಿಸಿರುವುದಾಗಿ ತಿಳಿಸಿದರು.