ಪ್ರಜಾಪ್ರಭುತ್ವ ಗೆಲುವಿಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲು ಯಲಬುರ್ಗಾ ಕ್ಷೇತ್ರದ ಚುನಾವಣಾ ಕಾವ್ಯ ಕೆ ವಿ ಕರೆ ನೀಡಿದರು.


ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರ ಪಟ್ಟಣದಲ್ಲಿ ಶನಿವಾರ ಮತದಾರರಿಗೆ ಮತದಾನದ ಕುರಿತು ಮಾಹಿತಿ ನೀಡಲು ವಾಕ್ ಥಾನ್ ಕಾರ್ಯಮಕ್ಕೆ
ಚುನಾವಣಾಧಿಕಾರಿಗಳಾದ ಕಾವ್ಯಾರಾಣಿ ಕೆ.ವಿ ಮತ್ತು ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಮಣ್ಣ ದೊಡ್ಮನಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಚುನಾವಣಾಧಿಕಾರಿಗಳು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2,23,036 ಅರ್ಹ ಮತದಾರರು ಇದ್ದು ಎಲ್ಲರೂ ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾನ ಸಂವಿದಾನದತ್ತವಾಗಿ ಸಿಕ್ಕ ಒಂದು ವರ,ಉತ್ತಮ ಪ್ರಜಾಪ್ರಭುತ್ವಕ್ಕಾಗಿ, ಒಳ್ಳೆಯ ನಾಯಕರನನ್ನು ಆಯ್ಕೆ ಮಾಡಬೇಕು ಎಂದ ಅವರು ವಿಶೇಷ ಚೇತನ(PWD) ಮತದಾರರು ಸಕ್ಷಮ ಯಾಪ್ ಮೂಲಕ ಮತದಾನಕೇಂದ್ರಕ್ಕೆ ಬರಲು ಸಹಾಯ ಕೇಳಿದರೆ ತಕ್ಷಣ ಸ್ಪಂದಿಸಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಶೇಕಡಾವಾರು ಮತದಾನ ಹೆಚ್ಚಿಸಲು *ಮಾದರಿಯಲ್ಲಿ ಮತಗಟ್ಟೆ, ಸಖಿ ಮತಗಟ್ಟೆ, ಯುವ ಮತಗಟ್ಟೆ, ಪಿ.ಡ್ಬ್ಲೂ.ಡಿ ಸ್ನೇಹಿ* ಮತಗಟ್ಟೆಗಳನ್ನು ವರ್ಣರಂಜಿತವಾಗಿ, ಮತ್ತು ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗಿದೆ.
*ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶೇಕಡಾ 78% ರಷ್ಟು ಮತದಾನವಾಗಿತ್ತು ಈ ಭಾರಿಯ ಚುನಾವಣೆಯಲ್ಲಿ ಶೇಕಡಾ 100%* ಮತದಾನವನ್ನು ಮಾಡಲು ಎಲ್ಲರೂ ಸಹಕರಿಸಿ ಎಂದರು.

ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಮಣ್ಣ ದೊಡ್ಮನಿ ಮಾತನಾಡಿ ಮೇ-10 ರಂದು ಜರುಗುವ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಓಳಗಾಗದೇ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಕಡ್ಡಾಯವಾಗಿ ಮತದಾನ ಮಾಡಲು ಸಲಹೆ ನೀಡಿದರು. ಅದಕ್ಕಾಗಿ ಗ್ರಾಮ ಪಂಚಾಯತಿಗಳಿಂದ ಮತ ಕೇಂದ್ರಗಳಲ್ಲಿ ಶುದ್ಧಕುಡಿಯುವ ನೀರು, ನೆರಳಿನ ವ್ಯವಸ್ಥೆ, ವೀಲ್ ಚೇರ್, ಭೂತ ಗನ್ನಡಿ, ರ್ಯಾಂಪ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ತಹಶೀಲ್ದಾರರಾದ ನೀಲಪ್ರಭ ಬಬಲದ ಮಾತನಾಡಿ ಗರ್ಭಿಣಿಯರು, ಹಿರಿಯ ನಾಗರೀಕರು ಮತ ಕೇಂದ್ರಗಳಿಗೆ ಬರಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ ಕರ್ಣಂ ಸಾರ್ವಜನಿಕರಿಗೆ ಮತದಾರರ ಪ್ರತಿಜ್ಞಾ ವಿಧಿ ಭೋ಼ಧನೆ ಮಾಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಾದ ಪ್ರಕಾಶ ಬಾಗಲೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಶಿಕ್ಷಕರು,ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಬಿ.ಎಲ್.ಓ ಗಳು ನರೇಗಾ ಸಿಬ್ಬಂದಿಗಳು, ಸ್ವ ಸಹಾಯ ಸಂಘದ ಪ್ರತಿನಿಧಿಗಳು, ತಾಲೂಕ ಪಂಚಾಯತಿ ಮತ್ತು ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಪೌರ ಕಾರ್ಮಿಕರು ಹಾಗೂ ಇತರರಿದ್ದರು

Leave a Reply

error: Content is protected !!