ಸಚಿವರಾದ ಬಳಿಕ ಶಿವರಾಜ ತಂಗಡಗಿ ತವರು ಜಿಲ್ಲೆಗೆ ಮೊದಲ ಭೇಟಿ

ಕೊಪ್ಪಳ : ನೂತನ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶಿವರಾಜ ತಂಗಡಗಿ ಅವರು ಮೊಟ್ಟಮೊದಲನೇ ಬಾರಿಗೆ ಮೇ 29ರಂದು ತವರು ಜಿಲ್ಲೆ ಕೊಪ್ಪಳಕ್ಕೆ ಆಗಮಿಸಿದರು.
ಪೂರ್ವ ನಿಗದಿಯಂತೆ ಸಚಿವರು ಮೊದಲಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ತೆರಳಿ ಅಲ್ಲಿನ ಚನ್ನಬಸವ ತಾತನವರ ಮಠ ಹಾಗೂ ಶ್ರೀ ದುರ್ಗಾದೇವಿ ದೇವಸ್ಥಾನ ಮತ್ತು ಇನ್ನೀತರ ಧಾರ್ಮಿಕ ಸ್ಥಳಗಳಿಗೆ ಪತ್ನಿಯೊಂದಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಬಳಿಕ ಸಚಿವರು ಸ್ವ-ಕ್ಷೇತ್ರ ಕನಕಗಿರಿಗೆ ತೆರಳಿದರು.

ಪುಸ್ತಕ ನೀಡಿ ಸ್ವಾಗತ: ಕಾರ್ಯಕರ್ತರು, ಅಭಿಮಾನಿಗಳು ಸರಳವಾಗಿ ಸ್ವಾಗತಿಸಬೇಕು. ಹೂವಿನ ಹಾರ, ಸನ್ಮಾನದ ಬದಲು ಪುಸ್ತಕ ನೀಡಿ ಸ್ವಾಗತಿಸಬೇಕು ಎಂದು ಸಚಿವರು ಅಪೇಕ್ಷೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಪುಸ್ತಕ ನೀಡಿ ಆತ್ಮೀಯ ಸ್ವಾಗತ ಕೋರಿದರು.

ಯಾವ ಖಾತೆ: ಮೇ 28ರಂದು ಖಾತೆ ಹಂಚಿಕೆ ಮಾಡಿ ಅಧಿಸೂಚನೆಯನ್ನು ಹೊರಡಿಸಿದ್ದು, ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಜ ತಂಗಡಗಿ ಅವರು ನೂತನ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರಿದ ಬಳಿಕ ಅವರಿಗೆ ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆ ದೊರೆತಿದೆ.

Leave a Reply

error: Content is protected !!